ಹಲ್ದ್ವಾನಿ ಹಿಂಸಾಚಾರ: ಬನ್‌ಬುಲ್ಪುರದಲ್ಲಿ ರಾತ್ರಿ ಮಾತ್ರ ಕರ್ಫ್ಯೂ ಮುಂದುವರಿಕೆ

19/02/2024

ಹಲ್ದ್ವಾನಿಯ ಬನ್‌ಬುಲ್ಪುರ ಪ್ರದೇಶದಲ್ಲಿ ಕರ್ಫ್ಯೂ ಅನ್ನು ಮತ್ತಷ್ಟು ಸಡಿಲಿಸಲಾಗಿದೆ. ನೈನಿತಾಲ್ ಜಿಲ್ಲಾಡಳಿತವು ಈಗ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ತಿಳಿಸಿದೆ. ಹಲ್ದ್ವಾನಿಯ ಬನ್ ಬುಲ್ಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದರಸಾವನ್ನು ನೆಲಸಮಗೊಳಿಸಿದ ನಂತರ ಫೆಬ್ರವರಿ 8 ರಂದು ಹಿಂಸಾಚಾರ ಭುಗಿಲೆದ್ದಿತು. ಸ್ಥಳೀಯರು ಪುರಸಭೆಯ ಕಾರ್ಮಿಕರು ಮತ್ತು ಪೊಲೀಸರ ಮೇಲೆ ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದರು. ಅನೇಕ ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯಬೇಕಾಯಿತು. ನಂತರ ಗುಂಪು ಬೆಂಕಿ ಹಚ್ಚಿತ್ತು.

ಹಿಂಸಾಚಾರದಲ್ಲಿ ಆರು ಗಲಭೆಕೋರರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಭಾನುವಾರ ಹೊರಡಿಸಿದ ಆದೇಶದ ಪ್ರಕಾರ ಬನ್‌ಬುಲ್ಪುರದಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಕರ್ಫ್ಯೂನಲ್ಲಿ 17 ಗಂಟೆಗಳ ಸಡಿಲಿಕೆ ಇರುತ್ತದೆ. ಮುಂದಿನ ಆದೇಶದವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಇತ್ತೀಚಿನ ಸುದ್ದಿ

Exit mobile version