ಹಾಸನ: ಪತಿ, ಮಗನನ್ನು ತೊರೆದು ಚಲಿಸುವ ಕಾರಿನಲ್ಲೇ ಪ್ರಿಯಕರನ ಜೊತೆ ಮದುವೆಯಾದ ಮಹಿಳೆ! ವಿಡಿಯೋ ವೈರಲ್

hassan
13/04/2026

ಹಾಸನ: ಜಿಲ್ಲೆಯಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆಯೊಂದು ನಡೆದಿದ್ದು, ಎಂಟು ವರ್ಷಗಳ ಕಾಲ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು ತನ್ನ ಪತಿ ಮತ್ತು ಏಳು ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾಗಿದ್ದಾರೆ. ಈ ವಿಲಕ್ಷಣ ಮದುವೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಮಹಿಳೆಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಯುವಕನೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಏಳು ವರ್ಷದ ಮಗನಿದ್ದಾನೆ. ಇತ್ತೀಚೆಗೆ ‘ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಮನೆಯಿಂದ ಹೊರಟಿದ್ದ ಮಹಿಳೆ ಮರಳಿ ಬಂದಿರಲಿಲ್ಲ.

ಹುಡುಕಾಟ ನಡೆಸಿದಾಗ, ಆಕೆ ತನ್ನ ಪ್ರಿಯಕರ ಸಚಿನ್ ಎಂಬಾತನ ಜೊತೆ ಓಡಿ ಹೋಗಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಚಲಿಸುತ್ತಿರುವ ಕಾರಿನಲ್ಲೇ ಸಚಿನ್ ಹರ್ಷಿತಾಳಿಗೆ ತಾಳಿ ಕಟ್ಟಿ, ಕಾಲುಂಗರ ತೊಡಿಸಿ ಮದುವೆಯಾಗಿದ್ದಾನೆ. ಈ ದೃಶ್ಯಗಳನ್ನು ಮೊಬೈಲ್‌ ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪತ್ನಿಯ ಈ ನಡೆಯಿಂದ ಕಂಗೆಟ್ಟ ಪತಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಲೊಕೇಶನ್ ಆಧರಿಸಿ ಮಹಿಳೆಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ ವಿಚಾರಣೆ ವೇಳೆ ಪತಿ ಹಾಗೂ ಮಗನ ಜೊತೆ ಹೋಗಲು ನಿರಾಕರಿಸಿದ ಮಹಿಳೆ, “ನಾನು ಪ್ರಿಯಕರ ಸಚಿನ್ ಜೊತೆಯೇ ಹೋಗುತ್ತೇನೆ” ಎಂದು ಹಠ ಹಿಡಿದಿದ್ದಾಳೆ. ಸದ್ಯ ಪೊಲೀಸರು ಹರ್ಷಿತಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version