ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ ಘೋಷಣೆ

rain
30/05/2025

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆ ಹಿನ್ನೆಲೆ ದ.ಕ. ಜಿಲ್ಲೆಯ ಎಲ್ಲ  ಅಂಗನವಾಡಿ ಕೇಂದ್ರ, ಪ್ರಾಥಮಿಕ ಪ್ರೌಢಶಾಲೆಗಳಿಗೆ  ಮೇ 30(ಇಂದು) ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ನಿನ್ನೆ ಸಂಜೆಯಿಂದ ಆರಂಭವಾದ ನಿರಂತರ ಮಳೆ ಇಂದು ಬೆಳಗ್ಗಿನವರೆಗೂ ನಿರಂತರವಾಗಿ ಸುರಿಯುತ್ತಿದೆ.

ಮಳೆಯ ನಡುವೆ ಮಂಗಳೂರು ನಗರದ ನಂತೂರಿನಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಬಿಕರ್ನಕಟ್ಟೆ ಕಡೆಯಿಂದ ಬರುವ ವಾಹನಗಳಿಗೆ ನಂತೂರು ಸರ್ಕಲ್ ನ ಎಡಭಾಗದಲ್ಲಿ ದೊಡ್ಡ ಹೊಂಡ ಸ್ವಾಗತಿಸುತ್ತಿದೆ. ಭಾರೀ ವಾಹನಗಳ ನಡುವೆ ಈ ಹೊಂಡಕ್ಕೆ ದ್ವಿಚಕ್ರವಾಹನಗಳು ಇಳಿದು ಹೋಗುತ್ತಿವೆ. ಇದು ಅಪಾಯಕಾರಿಯಾಗಿ ಪರಿಣಮಿಸಿದೆ.

ಇನ್ನೂ ಮಂಗಳೂರು ನಗರದಲ್ಲಿ ರಸ್ತೆಯ ನಡುವೆ ಅಲ್ಲಲ್ಲಿ ಹಾಕಿರುವ ಮ್ಯಾನ್ ಹೋಲ್ ಗಳ ಗುಂಡಿಗಳು ರಸ್ತೆಯಿಂದ ತಗ್ಗಿ ನಿಂತು ಸಣ್ಣ ಪ್ರಮಾಣದ ಗುಂಡಿಗಳಾಗಿ ಮಾರ್ಪಟ್ಟಿವೆ. ಇದು ದ್ವಿಚಕ್ರವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version