ಕಾಫಿನಾಡಲ್ಲಿ ಪ್ರವಾಸಿಗರ ಪ್ರವಾಹ: ಮುಳ್ಳಯ್ಯನಗಿರಿಯಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಟ್ರಾಫಿಕ್ ಜಾಮ್  

mullayanagiri
01/11/2024

ಚಿಕ್ಕಮಗಳೂರು:  ಸಾಲು–ಸಾಲು ರಜೆಯಿಂದಾಗಿ ಕಾಫಿನಾಡಲ್ಲಿ ಪ್ರವಾಸಿಗರ ಪ್ರವಾಹವೇ ಉಂಟಾಗಿದೆ.  ಇದರಿಂದಾಗಿ ಮುಳ್ಳಯ್ಯನಗಿರಿಯಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಟ್ರಾಫಿಕ್ ಜಾಮ್  ಉಂಟಾಗಿದೆ.

ಭಾರೀ ಪ್ರವಾಸಿಗರ ಆಗಮನದಿಂದ ಗಿರಿ ತುದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹೋಗಿರುವ ವಾಹನಗಳು ವಾಪಸ್ ಬರೋದಕ್ಕೆ ಜಾಗವೇ ಇಲ್ಲದಂತೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಟ್ರಾಫಿಕ್ ನಿಯಂತ್ರಿಸಲು ಪೊಲೀಸರು, ಸ್ಥಳೀಯರು ಹರಸಾಹಸಪಡುತ್ತಿದ್ದಾರೆ. ನಿರಂತರ ಮಳೆಯಿಂದ ಮುಳ್ಳಯ್ಯನಗಿರಿ ಸೌಂದರ್ಯ ಇಮ್ಮಡಿಗೊಂಡಿದೆ. ಪ್ರಕೃತಿ ಸೊಬಗನ್ನ ಕಂಡು ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ.

ಸಿಂಗಲ್ ರಸ್ತೆಯ ಗಿರಿ ತುದಿಯಲ್ಲಿ ಟ್ರಾಫಿಕ್ ನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.  ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version