ಹೋಂ ಸ್ಟೇನಲ್ಲಿ ಮಹಿಳಾ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

13/11/2023

ಉತ್ತರಪ್ರದೇಶದ ಆಗ್ರಾದ ತಾಜ್‌ಗಂಜ್ ಪ್ರದೇಶದಲ್ಲಿ ಹೋಂ ಸ್ಟೇನಲ್ಲಿ ಮಹಿಳಾ ಉದ್ಯೋಗಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಯುವತಿ ಪ್ರತಿಭಟಿಸಿದಾಗ ಆಕೆಗೆ ಆರೋಪಿಗಳು ಥಳಿಸಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆಯ ಸ್ಥಿತಿ ಶೋಚನೀಯವಾಗಿತ್ತು.

ಸಂತ್ರಸ್ತೆಯ ದೂರಿನ ಮೇರೆಗೆ ಸಾಮೂಹಿಕ ಅತ್ಯಾಚಾರದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸೂರಜ್ ಕುಮಾರ್ ರೈ ತಿಳಿಸಿದ್ದಾರೆ. ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಹೋಮ್ ಸ್ಟೇಯನ್ನು ಸೀಲ್ ಮಾಡಲಾಗಿದೆ. ಮಹಿಳೆ ಆಗ್ರಾದವಳಲ್ಲ. ಘಟನೆಯ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದರು.

ಹೋಂ ಸ್ಟೇನಲ್ಲಿ ಐವರು ಯುವಕರು ತನಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಮುಖ ಆರೋಪಿ ಜಿತೇಂದ್ರ ರಾಥೋಡ್. ಉಳಿದ 4 ಮಂದಿ ಈತನ ಸ್ನೇಹಿತರಾಗಿದ್ದರು. ಅವರ ಹೆಸರು ರವಿ ರಾಥೋಡ್, ಮನೀಶ್ ಕುಮಾರ್, ದೇವ್ ಕಿಶೋರ್. ಒಬ್ಬರ ಹೆಸರು ತಿಳಿದುಬಂದಿಲ್ಲ. ಎಲ್ಲಾ ಆರೋಪಿಗಳು ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯವರಾಗಿದ್ದಾರೆ.
ಮಹಿಳೆ ಎರಡು ವರ್ಷಗಳಿಂದ ಹೋಂ ಸ್ಟೇನಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ತಡರಾತ್ರಿ ಅವರು ಹೋಂ ಸ್ಟೇನಲ್ಲಿದ್ದರು.

ಇತ್ತೀಚಿನ ಸುದ್ದಿ

Exit mobile version