11:51 AM Saturday 23 - August 2025

ಒತ್ತೆಯಾಳುಗಳನ್ನು ರಕ್ಷಿಸಲು ಇಸ್ರೇಲ್ ಪ್ರಧಾನಿ ವಿಫಲ: ಹಮಾಸ್ ಬಿಡುಗಡೆ ಮಾಡಿದ ವೀಡಿಯೋನಲ್ಲಿ ಇಸ್ರೇಲ್ ಮಹಿಳೆಯರ ಆಕ್ರೋಶ

01/11/2023

ಮೂವರು ಇಸ್ರೇಲ್ ದೇಶದ ಮಹಿಳಾ ಒತ್ತೆಯಾಳುಗಳ ವೀಡಿಯೋವನ್ನು ಹಮಾಸ್‌ ಬಿಡುಗಡೆಗೊಳಿಸಿದೆ. ಇದರಲ್ಲಿ ಒತ್ತೆಯಾಳು ಮಹಿಳೆಯರು ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತಾನ್ಯಹು ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
ಹಮಾಸ್‌ ದಾಳಿ ವೇಳೆ ತನ್ನ ನಾಗರಿಕರನ್ನು ರಕ್ಷಿಸಲು ನೆತಾನ್ಯಹು ಅವರು ವಿಫಲರಾಗಿದ್ದಾರೆ ಎಂದು ಒತ್ತೆಯಾಳು ಮಹಿಳೆಯರು ಆರೋಪಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನೆತಾನ್ಯಹು ಇದು ಬರ್ಬರವಾದ ಸೈಕಾಲಾಜಿಕಲ್ ಅಜೆಂಡಾ ಎಂದಿದ್ದಾರೆ.
ತಮ್ಮನ್ನು ಬಿಡುಗಡೆಗೊಳಿಸದೇ ಇರುವುದಕ್ಕೆ ಆಕ್ರೋಶ ಹೊರಹಾಕಿರುವ ಮಹಿಳೆಯರು, ಪ್ಯಾಲೆಸ್ತೀನ್ ಕೈದಿಗಳಿಗೆ ಪ್ರತಿಯಾಗಿ ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಕೋರಿದ್ದಾರೆ.

ನೀವು ನಮ್ಮನ್ನು ಬಿಡುಗಡೆಗೊಳಿಸಬೇಕಿತ್ತು. ನಮ್ಮನ್ನು ಬಿಡುಗಡೆಗೊಳಿಸುವುದಾಗಿ ಮಾತು ಕೊಟ್ಟಿದ್ದೀರಿ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆತಾನ್ಯಹು, ಪ್ರತಿ ಒತ್ತೆಯಾಳನ್ನು ಬಿಡುಗಡೆಗೊಳಿಸಿ ಕರೆತರುವ ಕುರಿತು ತಾವು ಮಾಡಿರುವ ಪ್ರತಿಜ್ಞೆಯನ್ನು ಪುನರುಚ್ಚಿಸಿದ್ದಾರೆ.

ಹಮಾಸ್‌ ಯುದ್ಧಾಪರಾಧಗಳನ್ನು ಮಾಡಿ ನಿಮ್ಮನ್ನು ಅಪಹರಣ ಮಾಡಿದೆ. ನಿಮಗಾಗಿ ಮತ್ತು ಇತರ ಒತ್ತೆಯಾಳುಗಳಿಗಾಗಿ ನಮ್ಮ ಹೃದಯಗಳು ಮಿಡಿಯುತ್ತಿದೆ. ಒತ್ತೆಯಾಳುಗಳನ್ನು ವಾಪಸ್‌ ಕರೆತರಲು ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನೆತಾನ್ಯಹು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version