ಬಯಲಾಯಿತು ಕ್ರೂರ ಕೃತ್ಯ: ಅಪ್ರಾಪ್ತೆಗೆ ಬಿಜೆಪಿ ಮುಖಂಡನಿಂದ ಲೈಂಗಿಕ ದೌರ್ಜನ್ಯ; ಕೇಸ್ ದಾಖಲು

15/02/2024
ಬಿಜೆಪಿ ಮುಖಂಡನೊಬ್ಬ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿಂದು ನಡೆದಿದೆ.
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಜೆಪಿ ನಾಯಕನ ವಿರುದ್ದ ಕಾಮತಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ಕುರಿತು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಭರೋಸಾ ಕೇಂದ್ರಕ್ಕೆ ಕಳುಹಿಸಿ ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ನಾಯಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣ ತನಿಖೆ ಮಾಡುತ್ತಿರುವ ಪೊಲೀಸರು ಸಂತ್ರಸ್ತೆಯ ಹೇಳಿಕೆಗಾಗಿ ಕಾಯುತ್ತಿದ್ದು, ನಿಯೋಜಿತ ಮಹಿಳಾ ಅಧಿಕಾರಿಯ ಮುಂದೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದು ಘಟನೆಯ ಸಂಪೂರ್ಣ ವಿಚಾರಣೆ ನಡೆಸಲಿದ್ದಾರೆ.