ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರನ್ನು ಧೈರ್ಯದಿಂದ ಎದುರಿಸಿ ಓರ್ವನನ್ನು ಸೆರೆ ಹಿಡಿದ ತಾಯಿ—ಮಗಳು

hyderabad
22/03/2024

ಹೈದರಾಬಾದ್: ದರೋಡೆ ಮಾಡಲು ಬಂದ ಇಬ್ಬರು ದರೋಡೆಕೋರರನ್ನು ತಾಯಿ ಮಗಳು ಸೇರಿ ಧೈರ್ಯದಿಂದ ಎದುರಿಸಿದ್ದಲ್ಲದೇ ಓರ್ವ ದರೋಡೆಕೋರನನ್ನು ಸೆರೆ ಹಿಡಿದ ಸಿನಿಮೀಯ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

ಗುರುವಾರ ಮಧ್ಯಾಹ್ನ ಹೈದರಾಬಾದ್ ನಲ್ಲಿರುವ ತಾಯಿ  ಹಾಗೂ ಮಗಳಿದ್ದ ಮನೆಯಲ್ಲಿ ಕಾಲಿಂಗ್ ಬೆಲ್ ಸದ್ದು ಕೇಳಿತ್ತು. ಡೋರ್ ತೆಗೆದ ವೇಳೆ ಇಬ್ಬರು ದರೋಡೆಕೋರರು  ಪಿಸ್ತೂಲ್ ತೋರಿಸಿ ಬೆದರಿಸಿದ್ದು, ಬಳಿಕ ತಾಯಿ ಅಮಿತಾ ಮೆಹೋತ್ ಅವರ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಾರೆ.

ನಂತರ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತಮ್ಮ ವಶಕ್ಕೆ  ನೀಡುವಂತೆ ಎಚ್ಚರಿಕೆ ನೀಡುತ್ತಾರೆ. ಆದರೆ ಧೈರ್ಯ ಶಾಲಿಯಾಗಿದ್ದ ತಾಯಿ ಹಾಗೂ  ಮಗಳು  ಏಕಾಏಕಿ ದರೋಡೆಕೋರರಿಗೆ ಒದ್ದು, ಕಿರುಚಾಡಿ, ಗಲಾಟೆ ಮಾಡಿದ್ದು, ಸ್ಥಳೀಯರನ್ನು ಸಹಾಯಕ್ಕಾಗಿ ಕರೆದಿದ್ದಾರೆ.

ಏಕಾಏಕಿ ನಡೆದ ಘಟನೆಯಿಂದ ವಿಚಲಿತರಾದ ದರೋಡೆಕೋರರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ ನೆರೆಹೊರೆಯವರೆಲ್ಲ ಸೇರಿ ಪ್ರೇಮಚಂದ್ ಎಂಬ ಓರ್ವ ದರೋಡೆಕೋರನನ್ನು ಹಿಡಿದಿದ್ದಾರೆ. ಸುಶೀಲ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಸುಶೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ದರೋಡೆಕೋರರು ಶಸ್ತ್ರಸಜ್ಜಿತರಾಗಿದ್ದರೂ ಕೂಡ ಧೈರ್ಯದಿಂದ ಎದುರಿಸಿದ ತಾಯಿ ಹಾಗೂ ಮಗಳನ್ನು ಹೈದರಾಬಾದ್ ಪೊಲೀಸರು ಗೌರವಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version