ನಾನು ಕೂಡ ಪ್ರೀತಿಸಿ ಮದುವೆಯಾಗಿದ್ದೇನೆ: ಪ್ರೇಮಿಗಳಿಗೆ ವಿಶೇಷ ಸಲಹೆ ನೀಡಿದ ಸಂತೋಷ್ ಹೆಗ್ಡೆ
14/02/2024
ನಾನು ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ, 54 ವರ್ಷ ಆಗಿದೆ, ಇನ್ನೂ ಡಿವೋರ್ಸ್ ಆಗಿಲ್ಲ, ಮುಂದೆ ಆಗುವ ಚಾನ್ಸ್ ಕೂಡ ಇಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಖುಷಿ ಆಗುತ್ತದೆ. ನಾನು ಕೂಡ ಪ್ರೀತಿಸಿ ಮದುವೆಯಾದವನು, ಪ್ರೀತಿ ಯಾವತ್ತೂ ಹಿಟ್ ಆ್ಯಂಡ್ ರನ್ ಆಗಬಾರದು, ಪ್ರೀತಿಸಿ ಮದುವೆಯಾದವರು ಡಿವೋರ್ಸ್ ಕೇಳಬಾರದು ಅಂತ ಕಾನೂನು ಮಾಡಬೇಕು ಎಂದರು.
83 ವರ್ಷದ ಸಂತೋಷ್ ಹೆಗ್ಡೆ ಅವರು ಪ್ರೇಮಿಗಳ ದಿನದಂದು ತಮ್ಮ ಅನುಭವವನ್ನು ಹಂಚಿಕೊಂಡರು. ನಿಟ್ಟೆ ಮೂಲದ ಸಂತೋಷ್ ಹೆಗ್ಡೆ ಅವರು ಶಾರದಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈಗ ಸಂತೋಷ್ ಹೆಗ್ಡೆ ಅವರಿಗೆ 83 ವರ್ಷ ವಯಸ್ಸಾಗಿದೆ. ಅವರ ಪ್ರೀತಿಸಿ ವಿವಾಹವಾಗಿ 54 ವರ್ಷಗಳಾಗಿವೆ.

























