ಇಸ್ರೇಲ್ ನಿಂದ ಹಮಾಸ್ ಮುಖಂಡನ ಮಕ್ಕಳು, ಮೊಮ್ಮಕ್ಕಳ ಹತ್ಯೆ: ‘ನನಗೆ ನಿದ್ದೆಯೇ ಹತ್ತಿಲ್ಲ’ ಎಂದ ಸಾಹಿತಿ

ಇಸ್ರೇಲ್ ನಿಂದ ಹಮಾಸ್ ಮುಖಂಡನ ಮಕ್ಕಳು, ಮೊಮ್ಮಕ್ಕಳ ಹತ್ಯೆ: ‘ನನಗೆ ನಿದ್ದೆಯೇ ಹತ್ತಿಲ್ಲ’ ಎಂದ ಸಾಹಿತಿತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಇಸ್ರೇಲ್ ನ ದಾಳಿಯಲ್ಲಿ ಹತ್ಯೆಗೀಡಾಗಿ ದ್ದಾರೆ ಎಂಬ ಮಾಹಿತಿಯನ್ನು ತಿಳಿದ ತಕ್ಷಣ ಹಮಾಸ್ ನ ಮುಖಂಡ ಇಸ್ಮಾಈಲ್ ಹನಿಯ್ಯ ಪ್ರತಿಕ್ರಿಯಿಸಿದ ವಿಡಿಯೋವನ್ನು ನೋಡಿ ನಾನು ಸ್ತಬ್ಧವಾಗಿ ಹೋದೆ. ಅದನ್ನು ನೋಡಿದ ಬಳಿಕ ನನಗೆ ನಿದ್ದೆಯೇ ಹತ್ತಿಲ್ಲ ಎಂದು ಸಾಹಿತಿ ಮತ್ತು ಆಕ್ಟಿವಿಸ್ಟ್ ಆಗಿರುವ ಮೀನಾ ಕಂಡ ಸ್ವಾಮಿ ಹೇಳಿದ್ದಾರೆ. ಕೇರಳದ ಈ ಸಾಹಿತಿ ಎಕ್ಸ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಅದು ವೈರಲಾಗಿದೆ.
ಜಗತ್ತು ಈದ್ ಆಚರಿಸುತ್ತಿರುವ ಸಂದರ್ಭದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸಾಗುತ್ತಿದ್ದ ವಾಹನದ ಮೇಲೆ ಇಸ್ರೇಲ್ ಬಾಂಬು ಹಾಕಿ ಸಾಯಿಸಿದೆ. ಆದರೆ ಇದಕ್ಕೆ ಇಸ್ಮಾಯಿಲ್ ಹನಿಯ ನೀಡಿರುವ ಪ್ರತಿಕ್ರಿಯೆ ಎಲ್ಲ ಜನಾಂಗ ಹತ್ಯೆ ಕೋರರಿಗೆ ಪಾಠದಂತಿದೆ. ವಿಮೋಚನ ತಂಡಗಳು ಹೇಗೆ ಜಗತ್ತಿನಲ್ಲಿ ಕೆಲಸ ಮಾಡುತ್ತಿವೆ ಅನ್ನುವುದಕ್ಕೆ ಅವರ ಮಾತುಗಳು ಅತಿ ದೊಡ್ಡ ಉದಾಹರಣೆ ಎಂದು ಮೀನಾ ಕಂಡ ಸ್ವಾಮಿ ಹೇಳಿದ್ದಾರೆ.
ಜನಾಂಗ ದ್ವೇಷಿಗಳಿಗೆ ವಿಮೋಚನ ಹೋರಾಟ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಸಣ್ಣ ಅರಿವೂ ಇಲ್ಲ. ಇವರು ಇತರರ ಸಂಕಟ ಮತ್ತು ಸಾವನ್ನು ತಮ್ಮ ಪಾಲಿನ ಸಂಕಟ ಮತ್ತು ಸಾವೆಂದೆ ಪರಿಗಣಿಸುತ್ತಾರೆ. ಇತರರ ನೋವನ್ನು ತನ್ನ ನೋವಾಗಿ ಅನುಭವಿಸಲು ಸಾಧ್ಯವಿರುವವರೇ ವಿಮೋಚನಾ ಹೋರಾಟಗಾರರು. ಆದರೆ ಸ್ವಾರ್ಥಿಗಳಿಗೆ ಈ ಸತ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದಲೇ 13000 ಫೆಲೆಸ್ತೀನಿ ಮಕ್ಕಳ ಸಾವಿನ ಜೊತೆಗೆ ತನ್ನ ಮಕ್ಕಳ ಸಾವನ್ನೂ ಸೇರಿಸಿ ಆ ಎಲ್ಲ ನೋವನ್ನು ಅನುಭವಿಸಲು ಇಸ್ಮಾಯಿಲ್ ಹನಿಯರಿಗೆ ಸಾಧ್ಯ ಆಯಿತು ಎಂದು ಮೀನಾ ಕಂಡ ಸ್ವಾಮಿ ಬರೆದಿದ್ದಾರೆ. ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಪರಿಸ್ಥಿತಿ ಎಲ್ಲಾ ಫೆಲೆ ಸ್ತೀನಿ ಮಕ್ಕಳ ಪರಿಸ್ಥಿತಿಯಂತೆಯೇ ಇದೆ. ಎಲ್ಲ ಮಕ್ಕಳ ತಾಯಂದಿರು ಅನುಭವಿಸಿದ ನೋವಿನಂತೆಯೇ ನನ್ನ ನೋವು ಕೂಡ ಎಂದು ಇಸ್ಮಾಯಿಲ್ ಹನಿಯ ಪ್ರತಿಕ್ರಿಯಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth