ಹಿಂದೂ–ಮುಸ್ಲಿಂ ಎಂದು ರಾಜಕೀಯ ಮಾಡಿದ ದಿನ ನಾನು ರಾಜಕೀಯ ತೊರೆಯುತ್ತೇನೆ:  ಪ್ರಧಾನಿ ಮೋದಿ

pm modi
15/05/2024

ವಾರಣಾಸಿ: ನಾನು ಹಿಂದೂ-ಮುಸ್ಲಿಂ ಎಂದು ರಾಜಕೀಯ ಮಾಡುವುದಿಲ್ಲ. ಹಾಗೆ ಮಾಡಲು ಪ್ರಾರಂಭಿಸಿದ ದಿನ ನಾನು ರಾಜಕೀಯವನ್ನು ತೊರೆಯುತ್ತೇನೆ. ನಾನು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಿಲ್ಲ, ಪ್ರತಿ ಬಡ ಕುಟುಂಬದ ಬಗ್ಗೆಯೂ ಮಾತನಾಡಿದ್ದೇನೆ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಇದು ನನ್ನ ನಿರ್ಣಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ’ ಹಂಚುತ್ತಾರೆ ಎಂದು ಹೇಳಿದ್ದೀರಿ? ಏಕೆ ಆ ರೀತಿ ಹೇಳಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದರು.

ಮೊದಲಿಗೆ ನಾನು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಮುಸ್ಲಿಮರ ಮೇಲಿರುವ ಪ್ರೀತಿಯನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಿಮ್ಮ ಹೇಳಿಕೆ ಮುಸ್ಲಿಮರ ವಿರುದ್ಧ ಅಲ್ಲ ಎಂದು ಮನವರಿಕೆ ಮಾಡಿಸುವಲ್ಲಿ ನೀವು ವಿಫಲರಾಗಿದ್ದೀರಿ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಮುಸಲ್ಮಾನರ ಪ್ರಶ್ನೆಯಲ್ಲ. ವೈಯಕ್ತಿಕವಾಗಿ ಮುಸ್ಲಿಮರು ನನ್ನನ್ನು ಇಷ್ಟಪಡಬಹುದು. ಆದರೆ 2002 ರ ನಂತರ ನನ್ನ ಇಮೇಜ್‌ ಗೆ ಕಳಂಕವಾಯಿತು. ನನ್ನ ಬಾಲ್ಯದಲ್ಲಿ ನಾನು ಮುಸ್ಲಿಂ ಕುಟುಂಬಗಳ ನಡುವೆ ಬದುಕಿದ್ದೇನೆ ಎಂದು ತಿಳಿಸಿದರು.

ನನ್ನ ಅನೇಕ ಸ್ನೇಹಿತರು ಮುಸ್ಲಿಮರು. ನನ್ನ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಈದ್ ದಿನದಂದು ನಮ್ಮ ಮನೆಗಳಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಊಟ ಬರುತ್ತಿತ್ತು. ಮಾಣಿಕ್ ಚೌಕ್‌ನಲ್ಲಿರುವ ಎಲ್ಲಾ ವ್ಯಾಪಾರಿಗಳು ಹಿಂದೂಗಳು. ಅಂಗಡಿಯವರೆಲ್ಲ ಮುಸ್ಲಿಮರು. ದೀಪಾವಳಿ ಸಂದರ್ಭದಲ್ಲಿ ಭಾರೀ ಜನಸಂದಣಿ ಇರುತ್ತದೆ. ನಾನು 2002 ರಲ್ಲಿ ಅಲ್ಲಿ ಸಮೀಕ್ಷೆಯನ್ನು ಮಾಡಿಸಿದ್ದೇನೆ. ನಾನು ಸಮೀಕ್ಷೆ ಮಾಡಲು ಹುಡುಗರನ್ನು ಕಳುಹಿಸಿದೆ. ಅಲ್ಲಿ ಮುಸಲ್ಮಾನರು ಹೇಳುತ್ತಿದ್ದರು. ಮೋದಿ ಇಲ್ಲದಿದ್ದರೆ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಮೋದಿ ಬಂದ ನಂತರ ಮಕ್ಕಳ ಬದುಕು ಬದಲಾಯಿತು ಎಂದು ಅವರ ತಾಯಿ ಸಂತಸಪಟ್ಟರು  ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version