ಮತದಾನದ ದಿನ ಕಂಪೆನಿಗಳು ರಜೆ ನೀಡದಿದ್ದರೆ, ಕಠಿಣ ಕ್ರಮ: ಮುಖ್ಯ ಚುನಾವಣಾಧಿಕಾರಿ

manoj kumar meena
16/04/2024

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ  ಏಪ್ರಿಲ್​ 26 ಮತ್ತು ಮೇ 7 ರಂದು ಎರಡೂ ದಿನ ಸರ್ಕಾರ ರಜೆ ಘೋಷಣೆ ಮಾಡಲಾಗಿದ್ದು, ಈ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ ಮತ್ತು ಮ್ಯಾನೇಜ್​ಮೆಂಟ್​ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದರು.

ಖಾಸಗಿ ಕಂಪನಿಗಳ ಮಾಲಿಕರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಸಿಬ್ಬಂದಿಗಳಿಗೆ ಉತ್ತೇಜಿಸುವುದಲ್ಲದೆ, ಸಾಧ್ಯವಾದರೆ ಅವರಿಗೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೇವೆ. ವರ್ಕ್​ ಫ್ರಾಮ್​ ಹೋಮ್ ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೇ.35 ಅಥವಾ ಇದಕ್ಕಿಂತ ಕಡಿಮೆ ಮತದಾನವಾಗಿರುವ ಬಿಬಿಂಪಿ ವ್ಯಾಪ್ತಿಯ 1,800 ಮತ್ತು ರಾಜ್ಯದ 5000 ಮತಗಟ್ಟೆಗಳನ್ನು ಗುರುತಿಸಿದ್ದೇವೆ. ನಾವು ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಹಾಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಮತ್ತು ರೆಸಿಡೆಂಟ್ ವೆಲ್‌ ಫೇರ್ ಅಸೋಸಿಯೇಷನ್‌ ಗಳನ್ನು ಸಂಪರ್ಕಿಸಿ ಮತದಾನದ ಬಗ್ಗೆ ತಿಳಿಸಿದ್ದೇವೆ. ಆದರೆ ನಾವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಏಪ್ರಿಲ್ 26 ಶುಕ್ರವಾರ ಆಗಿದ್ದು, ಮೊದಲು ಮತದಾನ ಮಾಡಿ ನಂತರ ರಜೆ ತೆಗೆದುಕೊಳ್ಳಬೇಕು ಅಂತ ಜನರಲ್ಲಿ ಮನವಿ ಮಾಡುತ್ತಿದ್ದೇವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version