ಉಡುಪಿಯಲ್ಲಿ ನಾಲ್ಕು ಹತ್ಯೆಯಾದರೂ ತುಟಿತೆರೆಯದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!: ತೀವ್ರ ಆಕ್ರೋಶ

lakshmi hebalkar
13/11/2023

ಉಡುಪಿ:  ಉಡುಪಿಯಲ್ಲಿ  ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಈವರೆಗೆ ತುಟಿ ತೆರೆದಿಲ್ಲ  ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉಡುಪಿಯಲ್ಲಿ ನಡೆದಿರುವ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಉಡುಪಿಯಲ್ಲಿ ಈ ಘಟನೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈವರೆಗೆ ಯಾವುದೇ ರೀತಿಯ ಖಂಡನೆ ವ್ಯಕ್ತಪಡಿಸಿ ಹೇಳಿಕೆ ನೀಡದಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸೇರಿದಂತೆ ಹಲವು ಗಣ್ಯರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಹೇಳಿಕೆ ನೀಡಿದ್ದರು.

ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಗೆ ಭೇಟಿ ನೀಡುವುದು ಬಿಡಿ ಒಂದು ಹೇಳಿಕೆ ಕೂಡ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ:

ನೇಜಾರು ನಾಲ್ವರ ಭೀಕರ ಹತ್ಯೆ ಪ್ರಕರಣ: ಆಟೋದಲ್ಲೇ ಹೋಗಿ 15 ನಿಮಿಷದಲ್ಲೇ ವಾಪಸ್‌ ಬಂದಿದ್ದ ಹಂತಕ: ನಾಲ್ವರನ್ನು ಕೊಂದಿದ್ದೇಕೆ?


ಇದನ್ನೂ ಓದಿ:

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಕೋಡಿಬೆಂಗ್ರೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ


 

ಇತ್ತೀಚಿನ ಸುದ್ದಿ

Exit mobile version