ಅಮೆರಿಕದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆ

ambedkar
15/10/2023

ವಾಷಿಂಗ್ಟನ್:  ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಅಮೆರಿಕದ ಮೇರಿ ಲ್ಯಾಂಡ್ ಉಪನಗರದಲ್ಲಿ ಇಂದು ಉದ್ಘಾಟಿಸಲಾಯಿತು.

ಈ ಪ್ರತಿಮೆಯು ವಿದೇಶದಲ್ಲಿ ಅನಾವರಣಗೊಳಿಸಿರುವ ಅಂಬೇಡ್ಕರ್ ಅವರ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಅಮೆರಿಕದ ವಿವಿಧ ಭಾಗದಿಂದ ಬಂದಿದ್ದ ಸುಮಾರು 500ಕ್ಕೂ ಹೆಚ್ಚು ಜನರು ಪ್ರತಿಮೆ ಅನಾವರಣ ವೇಳೆ ಜೈ ಭೀಮ್ ಘೋಷಣೆ ಕೂಗಿ ಸಂಭ್ರಮಿಸಿದರು.

ಶಿಲ್ಪಿ ರಾಮ್ ಸುತಾರ್ ಅವರು ಅಂಬೇಡ್ಕರ್ ಅವರ ಸುಂದರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಅಂಬೇಡ್ಕರ್ ಅವರ ಜೀವನ ಸಂದೇಶವನ್ನು ಸಾರಲು ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version