12:12 PM Wednesday 20 - August 2025

ಸ್ವಾತಂತ್ರ್ಯ ಕಾರ್ಯಕ್ರಮ: ರಾಹುಲ್ ಗಾಂಧಿಗೆ ಕೊನೆಯ ಸಾಲಿನಲ್ಲಿ ಸೀಟು; ವಿವಾದ ಸೃಷ್ಟಿ

15/08/2024

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಕೊನೆಯ ಸಾಲಿನಲ್ಲಿ ಸೀಟು ಒದಗಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಶಿಷ್ಟಾಚಾರಗಳ ಪ್ರಕಾರ ವಿರೋಧ ಪಕ್ಷದ ನಾಯಕರು ಸಂಪುಟ ಸಚಿವ ದರ್ಜೆ ಹೊಂದಿದ್ದು ಅವರಿಗೆ ಯಾವಾಗಲೂ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು.

ರಾಹುಲ್ ಗಾಂಧಿಗೆ ಕಲ್ಪಿಸಲಾಗಿದ್ದ ಆಸನ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿದೆ.
ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿದ್ದ ರಾಹುಲ್ ಗಾಂಧಿ ಭಾರತೀಯ ಹಾಕಿ ತಂಡದ ಫಾರ್ವರ್ಡ್ ಆಟಗಾರ ಗುರ್ಜಂತ್ ಸಿಂಗ್ ಪಕ್ಕದಲ್ಲಿ ಆಸೀನರಾಗಿರುವುದು ಚಿತ್ರದಲ್ಲಿ ಕಂಡುಬಂದಿದೆ. ಮುಂದಿನ ಸಾಲಿನ ಆಸನಗಳಲ್ಲಿ ಒಲಿಂಪಿಕ್ಸ್ ಪದಕ ವಿಜೇತರಾದ ಮನುಭಾಕರ್, ಸರಬ್ಜೋತ್ ಸಿಂಗ್ ಸಹಿತ ಇತರ ಕ್ರೀಡಾಪಟುಗಳು ಆಸೀನ ರಾಗಿದ್ದರು.

ಒಲಿಂಪಿಕ್ ಕಂಚು ವಿಜೇತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ರಂಥ ಆಟಗಾರರು ರಾಹುಲ್ ಗಾಂಧಿ ಅವರಿಗಿಂತ ಮುಂದಿನ ಸೀಟಿನಲ್ಲಿ ಆಸೀನರಾಗಿದ್ದರು.

ಆದರೆ ಮುಂದಿನ ಸಾಲಿನ ಆಸನಗಳನ್ನು ಒಲಂಪಿಕ್ ಪದಕ ವಿಜೇತರಿಗೆ ಮೀಸಲಿರಿಸಿದ್ದರಿಂದ ರಾಹುಲ್ ಗಾಂಧಿ ಹಿಂದಿನ ಸಾಲಿನ ಆಸನಕ್ಕೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಶಿಷ್ಟಾಚಾರಗಳ ಪ್ರಕಾರ ಲೋಕಸಭಾ ವಿಪಕ್ಷ ನಾಯಕನಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಬೇಕಾಗುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version