ಶಮಿ, ಕೊಹ್ಲಿ ಮಿಂಚಿನ ಆಟ: ಕಿವೀಸ್ ತಂಡವನ್ನು ಸೋಲುಣಿಸಿ 4 ವಿಕೆಟ್ ಗಳ ಜಯ ಗಳಿಸಿದ ಭಾರತ

23/10/2023

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾನುವಾರ ನಡೆದ 21ನೇ ಪಂದ್ಯದಲ್ಲಿ ಮುಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು 4 ವಿಕೆಟ್ ಗಳಿಂದ ನ್ಯೂಝಿಲೆಂಡ್ ತಂಡವನ್ನು ಸೋಲಿಸಿತು. ಈ ಮೂಲಕ ಭಾರತ ಸತತ ಐದನೇ ಗೆಲುವು ದಾಖಲಿಸಿತು.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಭಾರತ ತಂಡ ವೇಗಿ ಮುಹಮ್ಮದ್ ಶಮಿಯ ಮಾರಕ ಬೌಲಿಂಗ್ ನೆರವಿನಿಂದ 273 ರನ್ ಗಳಿಗೆ ಕಿವೀಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಕಿವೀಸ್ ಪರ ಮಿಚ್ಚೆಲ್ 130 ರಚಿನ್ ರವೀಂದ್ರ 75, ಗ್ಲೆನ್ ಫಿಲಿಪ್ಸ್ 23 ರನ್ ಗಳಿಸಿದದ್ದು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತ ತಂಡದ ಪರ ಶಮಿ 5 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2, ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

ನಂತರ ನ್ಯೂಝಿಲೆಂಡ್ ನೀಡಿದ 274 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ 46, ಶುಭ್ ಮನ್ ಗಿಲ್ 26, ಶ್ರೇಯಸ್ ಅಯ್ಯರ್ 33, ಕೆಎಲ್ ರಾಹುಲ್ 27, ಸೂರ್ಯಕುಮಾರ್ ಯಾದವ್ ಕೇವಲ 2 ರನ್ ಗಳಿಸಿ ಔಟಾದರು. ಆದರೆ, ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 95 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.

ಶತಕದ ಹೊಸ್ತಿಲಲ್ಲಿ ಗ್ಲೇನ್ ಫಿಲಿಪ್ಸ್ ಅವರಿಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು. ನಂತರ ಜೊತೆಯಾದ ರವೀಂದ್ರ ಜಡೇಜಾ (39) ಮುಹಮ್ಮದ್ ಶಮಿ (1) ರನ್ ಮೂಲಕ 48 Kooಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸುವ ಮೂಲಕ ಭಾರತ ಗೆಲುವು ಸಾಧಿಸಿತು. ಮುಹಮ್ಮದ್ ಶಮಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಇತ್ತೀಚಿನ ಸುದ್ದಿ

Exit mobile version