5:13 PM Wednesday 10 - December 2025

ಸ್ಕಾಟ್ಲೆಂಡ್ ನಲ್ಲಿರೋ ಗುರುದ್ವಾರಕ್ಕೆ ಹೋಗುತ್ತಿದ್ದ ಭಾರತೀಯ ಹೈಕಮಿಷನರ್ ಗೆ ಖಲಿಸ್ತಾನಿಗಳ ತಡೆ: ಭಾರತ ಆಕ್ರೋಶ

01/10/2023

ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ಯುಕೆಯಲ್ಲಿನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಉಗ್ರಗಾಮಿಗಳು ತಡೆದಿದ್ದಾರೆ. ಈ ಘಟನೆಯನ್ನು ‘ಅವಮಾನಕರ’ ಎಂದು ಕರೆದಿರುವ ಭಾರತ, ಈ ಘಟನೆ ಕುರಿತು ಬ್ರಿಟಿಷ್ ಸರ್ಕಾರಕ್ಕೆ ವರದಿ ಮಾಡಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ವಿಕ್ರಮ್ ದೊರೈಸ್ವಾಮಿ ಗ್ಲ್ಯಾಸ್ಗೋದಲ್ಲಿನ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಮಿತಿಯೊಂದಿಗೆ ಸಭೆಯನ್ನು ಆಯೋಜಿಸಿದ್ದರು. ಇದೇ ವೇಳೆ ಕೆಲವು ತೀವ್ರಗಾಮಿ ಬ್ರಿಟಿಷ್ ಸಿಖ್ಖರು ಅವರನ್ನು ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದು ಅವರಿಗೆ “ಸ್ವಾಗತವಿಲ್ಲ” ಎಂದು ಹೇಳಿದ್ದಾರೆ.

ಸ್ಕಾಟ್ಲೆಂಡ್ ನ ಹೊರಗಿನ ಮೂವರು ಉದ್ದೇಶಪೂರ್ವಕವಾಗಿ ರಾಯಭಾರಿಯ ಭೇಟಿಗೆ ಅಡ್ಡಿಪಡಿಸಿದ್ದಾರೆ ಎಂದು ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಹಿರಿಯ ರಾಜತಾಂತ್ರಿಕರು ಗುರುದ್ವಾರಕ್ಕೆ ಆಗಮಿಸುತ್ತಿದ್ದಂತೆ ಅವರಲ್ಲಿ ಒಬ್ಬರು ರಾಜತಾಂತ್ರಿಕ ವಾಹನವನ್ನು ಹಿಂಸಾತ್ಮಕವಾಗಿ ತಡೆಯಲು ಪ್ರಯತ್ನಿಸಿದ್ದಾನೆ.

ಸಿಖ್ ತೀವ್ರಗಾಮಿಗಳ ಬೆದರಿಕೆಯಿಂದ ಭಾರತೀಯ ರಾಯಭಾರಿ ಮತ್ತು ಕಾನ್ಸುಲ್ ಜನರಲ್ ಆಫ್ ಇಂಡಿಯಾ (ಸಿಜಿ) ಅಲ್ಲಿಂದ ವಾಪಸ್ ಹೋಗಲು ನಿರ್ಧರಿಸಿದರು.

ಇತ್ತೀಚಿನ ಸುದ್ದಿ

Exit mobile version