ಯುದ್ಧಪೀಡಿತ ಫೆಲೆಸ್ತೀನ್ ಗೆ ಭಾರತದ ಸಹಕಾರ: ಫೆಲೆಸ್ತೀನ್ ಜನರಿಗೆ ಹೆಚ್ಚಿನ ವೈದ್ಯಕೀಯ ನೆರವು, ಮತ್ತಷ್ಟು ವಿಪತ್ತು ಪರಿಹಾರ ಸಾಮಾಗ್ರಿಗಳ ರವಾನೆ

23/10/2023

ಭಾರತವು ಫೆಲೆಸ್ತೀನ್ ಜನರಿಗೆ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಾಗ್ರಿಗಳನ್ನು ಒಳಗೊಂಡ ಮಾನವೀಯ ನೆರವನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ವೈದ್ಯಕೀಯ ಸರಬರಾಜುಗಳಲ್ಲಿ ಅಗತ್ಯ ಜೀವ ಉಳಿಸುವ ಔಷಧಿಗಳು ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿರುವ ರಕ್ಷಣಾತ್ಮಕ ಮತ್ತು ಶಸ್ತ್ರಚಿಕಿತ್ಸಾ ವಸ್ತುಗಳು ಸೇರಿವೆ. ತುರ್ತು ಪರಿಹಾರಕ್ಕಾಗಿ ಮಾನವೀಯ ನೆರವಿನಲ್ಲಿ ದ್ರವಗಳು ಮತ್ತು ನೋವು ನಿವಾರಕ ವಸ್ತುಗಳನ್ನು ಸೇರಿಸಲಾಗಿದೆ. ಸುಮಾರು 32 ಟನ್ ತೂಕದ ವಿಪತ್ತು ಪರಿಹಾರ ಸಾಮಾಗ್ರಿಗಳಲ್ಲಿ ಡೇರೆಗಳು, ಸ್ಲೀಪಿಂಗ್ ಬ್ಯಾಗ್ ಗಳು, ಟಾರ್ಪಾಲಿನ್‌ಗಳು, ಮೂಲಭೂತ ನೈರ್ಮಲ್ಯ ಸೌಲಭ್ಯಗಳು, ನೀರು ಶುದ್ಧೀಕರಣ ಮಾತ್ರೆಗಳು ಇತ್ಯಾದಿಗಳು ಸೇರಿವೆ.

ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ 17 ವಿಮಾನವು ಬೆಳಿಗ್ಗೆ 8 ಗಂಟೆಗೆ ಹಿಂಡನ್ ವಾಯುನೆಲೆಯಿಂದ ಹೊರಟಿತು. ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಈಜಿಪ್ಟ್ ನ ಎಲ್-ಅರಿಶ್ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಮಾನವೀಯ ನೆರವು ಹೊತ್ತ 20 ಟ್ರಕ್‌ಗಳಿಗೆ ಅಂತಿಮವಾಗಿ ಈಜಿಪ್ಟ್ ನ ರಾಫಾ ಗಡಿಯ ಮೂಲಕ ಗಾಜಾ ಪಟ್ಟಿಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು 2 ದಶಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿರುವ ಎನ್ಕ್ಲೇವ್ ನಲ್ಲಿ “ಅಗತ್ಯ ವಸ್ತುಗಳ ಅಗತ್ಯ ತುಂಬಾ ಹೆಚ್ಚಾಗಿದೆ” ಎಂದು ಹೇಳಿದ್ದಾರೆ. ಹೀಗಾಗಿ ಅವರು ಎನ್ ಕ್ಲೇವ್ ನಾದ್ಯಂತ ಹೆಚ್ಚುವರಿ ಸಹಾಯ ಬೆಂಗಾವಲುಗಳನ್ನು ಸುರಕ್ಷಿತವಾಗಿ ಸಾಗಿಸಲು ಅವರು ಕರೆ ನೀಡಿದರು. ಈಜಿಪ್ಟ್ ನಿಂದ ಗಾಝಾಗೆ 20 ಸಹಾಯ ಟ್ರಕ್‌ಗಳು ಪ್ರವೇಶಿಸಲು ರಾಫಾ ಗಡಿ ದಾಟುವಿಕೆಯ ಬಾಗಿಲನ್ನು ತೆರೆಯಲಾಯಿತು.

ಇತ್ತೀಚಿನ ಸುದ್ದಿ

Exit mobile version