ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐನಿಂದ ತಂಡ ಪ್ರಕಟ: ರಿಷಭ್ ಪಂತ್ ಗೆ ಅವಕಾಶ

08/09/2024

ರಿಷಭ್ ಪಂತ್ ರ ಪುನರ್ ಆಗಮನವಾಗಿದೆ. ಹೌದು. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೊನೆಯದಾಗಿ ಡಿಸೆಂಬರ್ 2022 ರಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದ ಪಂತ್, ಇತ್ತೀಚೆಗೆ ದುಲೀಪ್ ಟ್ರೋಫಿ 2024 ರ ಸಮಯದಲ್ಲಿ ರೆಡ್-ಬಾಲ್ ಕ್ರಿಕೆಟ್ ಗೆ ಮರಳಿದ್ಸರು. ವಿಕೆಟ್ ಕೀಪರ್ ಕಂ‌ ಬ್ಯಾಟ್ಸ್ ಮ್ಯಾನ್ ಪಂತ್ ಭಾನುವಾರ ಬೆಂಗಳೂರಿನಲ್ಲಿ ಭಾರತ ಎ ತಂಡವನ್ನು ಸೋಲಿಸಿದ ಭಾರತ ಬಿ ತಂಡದ ಭಾಗವಾಗಿದ್ದರು.

ದುಲೀಪ್ ಟ್ರೋಫಿ ರೌಂಡ್ 1 ಪಂದ್ಯದ ಸಮಯದಲ್ಲಿ ಸ್ಟಂಪ್ ಗಳ ಹಿಂದೆ ಸಂಚಲನ ಮೂಡಿಸಿದ್ದ ಪಂತ್ ಮತ್ತು ಧ್ರುವ್ ಜುರೆಲ್ ಅವರನ್ನು ತಂಡದಲ್ಲಿ ನಿಯೋಜಿತ ವಿಕೆಟ್ ಕೀಪರ್ ಗಳಾಗಿ ಆಯ್ಕೆ ಮಾಡಲಾಯಿತು. ಕೆಎಲ್ ರಾಹುಲ್ ಕೂಡ ಮೊದಲ ಟೆಸ್ಟ್ ಗೆ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ಎಲ್ಲರೂ ದುಲೀಪ್ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ತಂಡದಲ್ಲಿ ಯಶ್ ದಯಾಳ್ ಗೆ ಅವಕಾಶ ‌ನೀಡಿದ್ರೆ, ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಕ್ಕಿಲ್ಲ.

ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ಪ್ರಭಾವಶಾಲಿಯಾಗಿದ್ದ ಸರ್ಫರಾಜ್ ಖಾನ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version