ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನ

ನವದೆಹಲಿ: ತೇಜಸ್ ಯುದ್ಧ ವಿಮಾನ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಪತನಗೊಂಡಿದೆ. ಇಲ್ಲಿನ ಹಾಸ್ಟೆಲ್ ಕಾಂಪ್ಲೆಕ್ಸ್ ಒಂದಕ್ಕೆ ಯುದ್ಧ ವಿಮಾನ ಅಪ್ಪಳಿಸಿದೆ.
ವಿಮಾನ ಪತನಗೊಳ್ಳುವ ಮುನ್ನವೇ ಪೈಲಟ್ ವಿಮಾನ ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಬಂದಿದ್ದಾರೆ. ಇನ್ನು ವಿಮಾನ ಅಪ್ಪಳಿಸಿದ ಸ್ಥಳದಲ್ಲೂ ಯಾವುದೇ ಸಾವು ನೋವು ಸಂಭವಿಸಿಲ್ಲ.
2001ರಲ್ಲಿ ದೇಶೀಯ ನಿರ್ಮಿತ ತೇಜಸ್ ಸರಣಿಯ ಯುದ್ಧ ವಿಮಾನಗಳನ್ನು ಭಾರತೀಯ ವಾಯು ಪಡೆಗೆ ಸೇರ್ಪಡೆ ಮಾಡಿದ 23 ಬಳಿಕ ಇದೇ ಮೊದಲ ಬಾರಿಗೆ ಈ ಯುದ್ಧ ವಿಮಾನ ಪತನಗೊಂಡಿದೆ. ಹೀಗಾಗಿ, ಈ ಘಟನೆ ಕುರಿತಾಗಿ ಸಮಗ್ರ ತನಿಖೆ ನಡೆಸಲು ಭಾರತೀಯ ವಾಯು ಪಡೆ ಮುಂದಾಗಿದೆ.
ಭಾರತ್ ಶಕ್ತಿ ತರಬೇತಿ ವೇಳೆ ಫೈಟರ್ ಜೆಟ್ ಜೈಸಲ್ಮೇರ್ ನಲ್ಲಿ ಪತನಗೊಂಡಿದೆ. ಫೈಟರ್ ಜೆಟ್ ಪತನವಾಗಿರುವ ಘಟನೆ ಜವಾಹರ್ ಕಾಲೋನಿ ಬಳಿ ನಡೆದಿದೆ.
ಮಧ್ಯಾಹ್ನ 2 ಗಂಟೆಗೆ ಫೈಟರ್ ಜೆಟ್ ಹಾಸ್ಟೆಲ್ ಮೇಲ್ಛಾವಣಿಯ ಮೇಲೆ ಬಿದ್ದು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಹೇಗೋ ಇಬ್ಬರೂ ಪೈಲಟ್ಗಳು ಫೈಟರ್ ಜೆಟ್ನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth