ರಕ್ಷಣೆ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ಗರ್ಭಿಣಿಯನ್ನು ಕಾಪಾಡಿದ ಇಂಡಿಯನ್ ಆರ್ಮಿ

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿರುವ ವಿಲ್ಗಮ್ ಸೇನಾ ಶಿಬಿರದಲ್ಲಿ ಭಾರೀ ಹಿಮಪಾತದ ನಡುವೆ ಗರ್ಭಿಣಿಯ ಜೀವವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಉಳಿಸಿದೆ.
ರಾತ್ರಿ 10:40 ಕ್ಕೆ ಸೇನಾ ಶಿಬಿರಕ್ಕೆ ಎಸ್ಎಚ್ಒ ವಿಲ್ಗಮ್ ಮತ್ತು ಗರ್ಭಿಣಿ ಸಫೂರಾ ಬೇಗಂ ಅವರ ಪತಿ ಮುಷ್ತಾಕ್ ಅಹ್ಮದ್ ಅವರಿಂದ ತೊಂದರೆಯ ಕರೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಪರಿಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ತುರ್ತು ರಕ್ಷಣೆ ಮಾಡಿ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.
ಕಳೆದ ಎರಡು ದಿನಗಳಿಂದ ತೀವ್ರ ಹಿಮಪಾತದಿಂದಾಗಿ, ಖಾನ್ಬಾಲ್ ನಿಂದ ಪಿಎಚ್ಸಿ ವಿಲ್ಗಮ್ ಗೆ ಹೋಗುವ ರಸ್ತೆ ಹಾದುಹೋಗಲು ಅಸಾಧ್ಯವಾಗಿತ್ತು. ವಾಹನ ಸಂಚಾರವು ಅತ್ಯಂತ ಕಷ್ಟಕರವಾಗಿದೆ. ತುರ್ತು ಪರಿಸ್ಥಿತಿಯನ್ನು ಗುರುತಿಸಿದ ರಕ್ಷಣಾ ತಂಡ ಮತ್ತು ಸೇನಾ ಶಿಬಿರ ಕಕ್ರೋಸಾದ ವೈದ್ಯರು ಸಂಕಷ್ಟದ ಕರೆಗೆ ತಕ್ಷಣ ಸ್ಪಂದಿಸಿದರು. ಅವರು ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದರು. ಮಧ್ಯರಾತ್ರಿಯಲ್ಲಿ 2 ರಿಂದ 3 ಅಡಿ ಹಿಮದಲ್ಲಿ 7-8 ಕಿ.ಮೀ ಪಾದಯಾತ್ರೆ ಮಾಡಿದರು.
ಭಾರೀ ಹಿಮವು ರಸ್ತೆಯನ್ನು ಮುಚ್ಚಿ ಹಾಕಿದ್ದರೂ ರಕ್ಷಣಾ ತಂಡವು ಸಮಯಕ್ಕೆ ಸರಿಯಾಗಿ ಸ್ಥಳವನ್ನು ತಲುಪಿತು. ಗರ್ಭಿಣಿಯನ್ನು ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿ ಪಿಎಚ್ ಸಿ ವಿಲ್ಗಮ್ ಗೆ ಸ್ಥಳಾಂತರಿಸಲಾಯಿತು. ಪಿಎಚ್ ಸಿ ವಿಲ್ಗಮ್ ನಲ್ಲಿ ಈಗಾಗಲೇ ಸನ್ನದ್ಧರಾಗಿರುವ ವಿಲ್ಗಮ್ ಪೊಲೀಸರು ರೋಗಿಯನ್ನು ಸ್ವಾಗತಿಸಿದರು ಮತ್ತು ವೈದ್ಯರ ತಂಡವು ತಕ್ಷಣವೇ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಜರಾಗಿತ್ತು.