ಇಸ್ರೇಲ್-ಹಮಾಸ್ ಯುದ್ಧ: ತನ್ನ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ ಭಾರತ

ಇಸ್ರೇಲ್-ಹಮಾಸ್ ಯುದ್ಧಕ್ಕೆ ತನ್ನ ಬಲವಾದ ವಿರೋಧವನ್ನು ಭಾರತ ಮತ್ತೊಮ್ಮೆ ವ್ಯಕ್ತಪಡಿಸಿದೆ. ಹಾಗೂ ಪೂರ್ಣ ಪ್ರಮಾಣದ ವಿಶ್ವ ಸಂಸ್ಥೆಯ ಸದಸ್ಯತ್ವಕ್ಕೆ ಫೆಲೆಸ್ತೀನ್ ಮಾಡುತ್ತಿರುವ ಪ್ರಯತ್ನಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ. “ ಆದಷ್ಟು ಬೇಗ ಶಾಂತಿ ಸಂಧಾನಗಳು ನಡೆಯಬೇಕೆಂಬುದು ಆಶಯ,” ವ್ಯಕ್ತಪಡಿಸಿದೆ.
ವಿಶ್ವ ಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಗಾಝಾ ಸಂಘರ್ಷದಲ್ಲಿ ನಾಗರಿಕರ ಹತ್ಯೆಯನ್ನು ಖಂಡಿಸಿದರಲ್ಲದೆ ಅಂತರರಾಷ್ಟ್ರೀಯ ಕಾನೂನನನ್ನು ಎತ್ತಿಹಿಡಿಯಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಗಾಝಾಗೆ ಇನ್ನಷ್ಟು ಮಾನವೀಯ ಸಹಾಯ ಹರಿದು ಬರಬೇಕೆಂದೂ ಆಕೆ ಹೇಳಿದರು.
ಈ ಸಂಘರ್ಷದ ಕುರಿತಂತೆ ಭಾರತದ ನಿಲುವನ್ನು ಅನೇಕ ಬಾರಿ ನಮ್ಮ ನಾಯಕತ್ವ ಒತ್ತಿ ಹೇಳಿದೆ. ಈ ಯುದ್ಧವು ದೊಡ್ಡ ಸಂಖ್ಯೆಯ ನಾಗರಿಕರ, ಮಹಿಳೆಯರ ಮಕ್ಕಳ ಸಾವಿಗೆ ಕಾರಣವಾಗಿದೆ, ಈ ಮಾನವೀಯ ಬಿಕ್ಕಟ್ಟು ಅಸ್ವೀಕಾರಾರ್ಹ. ಅಂತರರಾಷ್ಟ್ರೀಯ ಕಾನೂನನ್ನು ಎಲ್ಲರೂ ಎಲ್ಲಾ ಸನ್ನಿವೇಶಗಳಲ್ಲಿ ಗೌರವಿಸಬೇಕು” ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth