5:14 PM Thursday 23 - October 2025

ಇಂಡೋನೇಷ್ಯಾದಲ್ಲಿರುವ ಹಿಂದೂ ದೇವಾಲಯದಲ್ಲಿ ವಿದೇಶಿ ಪ್ರವಾಸಿಗನಿಂದ ಬೆತ್ತಲೆ ಧ್ಯಾನ: ಆಕ್ರೋಶ, ಪೊಲೀಸರಿಂದ ಶೋಧ

05/10/2023

ಇಂಡೋನೇಷ್ಯಾದ ಬಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ವಿದೇಶಿ ಪ್ರವಾಸಿಗನೊಬ್ಬ ಬೆತ್ತಲೆಯಾಗಿ ಧ್ಯಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ‌ ಈ ಕುರಿತಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಆತನಿಗಾಗಿ ಹುಡುಕಾಡುತ್ತಿದ್ದಾರೆ.

ಧಾರ್ಮಿಕ ಸ್ಥಳಗಳಿಗೆ ನಗ್ನ ಪ್ರವಾಸಿಗರಿಗೆ ನಿರ್ಬಂಧವಿದ್ದರೂ ಸ್ಥಳೀಯ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿರುವ ಆತನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಮ್ ಫ್ರಿಂಜ್ಡ್ ಬೀಚ್‌ಗಳಿಗೆ ಹೆಸರುವಾಸಿಯಾಗಿರುವ ಬಾಲಿಯಲ್ಲಿ ಪ್ರವಾಸಿಗರು ಅಸಭ್ಯವಾಗಿ ವರ್ತಿಸಿದ್ದಾರೆ. ಹಿಂದೂ ಸಂಸ್ಕೃತಿಗೆ ಅಗೌರವ ತೋರಿರುವ ಹಿಂದೂ ದೇಗುಲದಲ್ಲಿ ವಿದೇಶಿ ಪ್ರಜೆಯು ನಗ್ನವಾಗಿ ಧ್ಯಾನ ಮಾಡುತ್ತಿರುವ ಈ ವಿಡಿಯೊವನ್ನು ಬಾಲಿನೀಸ್ ಪ್ರಭಾವಿ ನಿ ಲುಹ್ ಡಿಜೆಲಾಂಟಿಕ್ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಿಸಿ ವಿದೇಶಿ ಪ್ರಜೆಯನ್ನು ಗುರುತಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. ವಲಸೆ ಕಚೇರಿಯು ವ್ಯಕ್ತಿಯನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಲಸೆ ಕಚೇರಿ ಮುಖ್ಯಸ್ಥ ಟೆಡಿ ರಿಯಾಂಡಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version