ಗಾಝಾದಲ್ಲಿ ನೂರರಷ್ಟು ಮಸೀದಿಯ ನಿರ್ಮಾಣ: ಇಂಡೋನೇಷಿಯಾ ಘೋಷಣೆ

30/01/2025

ಗಾಝಾದಲ್ಲಿ ನೂರರಷ್ಟು ಮಸೀದಿಯನ್ನು ನಿರ್ಮಿಸುವುದಾಗಿ ಇಂಡೋನೇಷಿಯಾ ಘೋಷಿಸಿದೆ. ರಮಝಾನ್ ಹತ್ತಿರ ಬಂದಿರುವ ಈ ಸಮಯದಲ್ಲಿ ಗಾಝಾದ ಮಂದಿಯ ಅಗತ್ಯವನ್ನು ಪರಿಗಣಿಸಿ, ಈ ನಿರ್ಧಾರ ಕೈಗೊಂಡಿರುವುದಾಗಿ ಇಂಡೋನೇಷ್ಯಾ ಹೇಳಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ಗಾಝದಲ್ಲಿ ಸಾವಿರಕ್ಕಿಂತಲೂ ಅಧಿಕ ಮಸೀದಿಯನ್ನು ಇಸ್ರೇಲ್ ನಾಶಪಡಿಸಿದೆ ಎಂದು ಹೇಳಿರುವ ಇಂಡೋನೇಷ್ಯಾ, ತಕ್ಷಣಕ್ಕೆ ಹತ್ತು ಮಸೀದಿಯನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದೆ. ಈ ಕುರಿತಂತೆ ಗಾಝಾದ ಪ್ರಮುಖರಲ್ಲಿ ಮಾತಾಡಲಾಗಿದೆ ಮತ್ತು ಮಸೀದಿ ನಿರ್ಮಾಣದ ಆರಂಭ ಹೇಗೆ ಮತ್ತು ಯಾವಾಗ ಎಂಬ ಬಗ್ಗೆ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಇಂಡೋನೇಷ್ಯಾ ಹೇಳಿದೆ. ಮಸೀದಿ ನಿರ್ಮಾಣಕ್ಕೆ ಇಂಡೋನೇಷ್ಯಾದ ನಾಗರಿಕರು ಕೊಡುಗೆಯನ್ನು ನೀಡಲಿದ್ದಾರೆ ಎಂದು ಕೂಡ ಇಂಡೋನೇಷ್ಯಾ ಹೇಳಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version