ಇಂಡೊನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಚಿಮ್ಮಿದ ಬೂದಿ

ಇಂಡೊನೇಷ್ಯಾದ ಜಕಾರ್ತದ ಬಳಿ ಐಬು ಜ್ವಾಲಾಮುಖಿ ಸೋಮವಾರ ಬೆಳಿಗ್ಗೆ ಸ್ಫೋಟಗೊಂಡಿದ್ದು, ಆಗಸದಲ್ಲಿ ಹಲವಾರು ಕಿಲೋಮೀಟರ್ ದೂರದ ತನಕ ಲಾವಾರಸದಿಂದ ಉತ್ಪತ್ತಿಯಾದ ಬೂದಿ ಚಿಮ್ಮುತ್ತಿದೆ. ಜ್ವಾಲಾಮುಖಿ ಸ್ಫೋಟಗೊಳ್ಳುವಾಗ ದೊಡ್ಡ ಸದ್ದು ಕೂಡ ಕೇಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಲ್ಮಹೇರ ಎಂಬ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಬೆಳಿಗ್ಗೆ 9.12ಕ್ಕೆ ಸ್ಫೋಟಗೊಂಡಿದ್ದು ಸುಮಾರು ಐದು ನಿಮಿಷಗಳ ಕಾಲ ಆಗಸದಲ್ಲಿ 5 ಕಿಮೀಗೂ ಹೆಚ್ಚು ದೂರದ ತನಕ ಲಾವಾರಸದ ಬೂದಿ ಚಿಮ್ಮಿದೆ.
ಕಳೆದ ಶುಕ್ರವಾರ ಕೂಡ ಈ ಜ್ವಾಲಾಮುಖಿ ಸಣ್ಣ ಮಟ್ಟದಲ್ಲಿ ಸ್ಫೋಟಿಸಿತ್ತು. ಈ ಜ್ವಾಲಾಮುಖಿಯಿರುವ ಐದು ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಎಲ್ಲಾ ಚಟುವಟಿಕೆ ನಿಷೇಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth