3:24 AM Thursday 16 - October 2025

ಅಂತರ್ ಧರ್ಮೀಯ ವಿವಾಹ ನೋಂದಣಿಗೆ ತೆರಳುತ್ತಿದ್ದ ಮುಸ್ಲಿಮ್ ಯುವಕನಿಗೆ ಹಲ್ಲೆ

06/12/2020

ಅಲಿಘಡ: ಅಂತರ್ ಧರ್ಮೀಯ ವಿವಾಹ ನೋಂದಣಿಗೆ ತೆರಳುತ್ತಿದ್ದ ಮುಸ್ಲಿಮ್ ಯುವಕನ ಮೇಲೆ ಹಲ್ಲೆ ನಡೆಸಲಾದ ಘಟನೆ ಅಲಿಘಡ ನ್ಯಾಯಾಲಯದಲ್ಲಿ ಗುರುವಾರ ನಡೆದಿದೆ.

 ಅಲಿಘಡ ಮೂಲದ 21 ವರ್ಷದ ಯುವಕ ಸೋನು ಮಲಿಕ್, ಹಲ್ಲೆಗೊಳಗಾದ ಯುವಕನಾಗಿದ್ದಾನೆ.  ವಿವಾಹ ನೋಂದಣಿಗೆ ತೆರಳುತ್ತಿದ್ದ ವೇಳೆ ಈತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇನ್ನೂ ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಈತ ಮೊಹಾಲಿಯಲ್ಲಿ ಭೇಟಿಯಾಗಿದ್ದಾನೆ. ಡಿಸೆಂಬರ್ 1ರಂದು ಇವರಿಬ್ಬರು ಅಲಿಗಡಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.

ಇನ್ನೂ ಯುವಕ ಮುಸ್ಲಿಮ್ ಆಗಿದ್ದು, ಹಿಂದೂ ಯುವಕ ಎಂದು ನಂಬಿಸಿ ಅಪ್ರಾಪ್ತೆಯನ್ನು ವಿವಾಹವಾಗಲು ಬಂದಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version