ಪಾಕಿಸ್ತಾನದ ಮೇಲೆ ಇರಾನ್ ಕ್ಷಿಪಣಿ ದಾಳಿ: ಇಬ್ಬರು ಮಕ್ಕಳು ಸಾವು, ಮೂವರಿಗೆ ಗಂಭೀರ ಗಾಯ

ನವದೆಹಲಿ: ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಅಮಾಯಕ ಮಕ್ಕಳು ಮೃತಪಟ್ಟಿದ್ದು, ಮೂವರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಜೈಶ್ ಅಲ್ ಅದಿಲ್ ನೆಲೆ ಮೇಲೆ ಇರಾನ್ ದಾಳಿ ನಡೆಸಿತ್ತು. ದಾಳಿಯ ಬಳಿಕ ಪಾಕಿಸ್ತಾನ ಇರಾನ್ ರಾಯಭಾರಿಯನ್ನು ಇಸ್ಲಾಮಾಬಾದ್ ಗೆ ಕರೆಸಿಕೊಂಡು ಅಪ್ರಚೋದಿತ ಉಲ್ಲಂಘನೆಯನ್ನು ಖಂಡಿಸಿದೆ.
ಇನ್ನು ಇದು ಸ್ವೀಕಾರ್ಹವಲ್ಲ ಎಂದಿರುವ ಪಾಕಿಸ್ತಾನ ಇದು ಗಂಭೀರ ಪರಿಣಾಮವನ್ನು ಬೀರಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಪಾಕಿಸ್ತಾನವು ಇರಾನ್ ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಪ್ರಸ್ತುತ ಇರಾನ್‌ಗೆ ಭೇಟಿ ನೀಡುತ್ತಿರುವ ಪಾಕಿಸ್ತಾನದ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗದಿರಬಹುದು ಎಂದು ನಾವು ಅವರಿಗೆ ತಿಳಿಸಿರುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ನಡೆಯುವ ಅಥವಾ ನಿಗದಿಯಾಗಿದ್ದ ಎಲ್ಲಾ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.