ಇರಾನ್–ಅಮೆರಿಕ ಶಾಂತಿ ಮಾತುಕತೆಗೆ ಹಿನ್ನಡೆ: ಪಾಕಿಸ್ತಾನಕ್ಕೆ ಮುಖಭಂಗ
ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಇರಾನ್ ಮತ್ತು ಅಮೆರಿಕ ನಡುವಿನ ಮಹತ್ವದ ಶಾಂತಿ ಮಾತುಕತೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಲೆಬನಾನ್ ಮೇಲಿನ ದಾಳಿಗಳು ನಿಲ್ಲುವವರೆಗೂ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಲೆಬನಾನ್ ಮೇಲಿನ ಸಂಘರ್ಷವನ್ನು ಮಾತುಕತೆಯ ಪ್ರಸ್ತಾಪದಲ್ಲಿ ಸೇರಿಸದಿದ್ದರೆ ಇಸ್ಲಾಮಾಬಾದ್ ಗೆ ಯಾವುದೇ ನಿಯೋಗವನ್ನು ಕಳುಹಿಸುವುದಿಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರದಂದು ಈ ಮಾತುಕತೆ ನಡೆಯಬೇಕಿತ್ತು. ಪಾಕಿಸ್ತಾನವು ಇದನ್ನು ತನ್ನ ರಾಜತಾಂತ್ರಿಕ ಯಶಸ್ಸು ಎಂದು ಬಿಂಬಿಸಿಕೊಳ್ಳುತ್ತಿತ್ತು. ಆದರೆ ಇರಾನ್ ನಿಯೋಗ ಇನ್ನೂ ಪಾಕಿಸ್ತಾನಕ್ಕೆ ಬಾರದಿರುವುದು ಇಸ್ಲಾಮಾಬಾದ್ ಗೆ ದೊಡ್ಡ ಹಿನ್ನಡೆಯಾಗಿದೆ.
ಇತ್ತ ಇಸ್ರೇಲ್ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಲೆಬನಾನ್ ವಿಷಯವಾಗಿ ಮಾತುಕತೆ ನಡೆಸಬೇಕಿದ್ದರೆ ಅದು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಬೇಕೇ ಹೊರತು ಇಸ್ಲಾಮಾಬಾದ್ ನಲ್ಲಿ ಅಲ್ಲ ಎಂದು ಹೇಳಿದೆ. ಅಲ್ಲದೆ, ತನ್ನ ಗುರಿ ತಲುಪುವವರೆಗೂ ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಲೆಬನಾನ್‌ನಲ್ಲಿ ಸುಮಾರು 1500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ನಿಯೋಗ ಈಗಾಗಲೇ ಇಸ್ಲಾಮಾಬಾದ್ ತಲುಪಿದ್ದರೂ, ಇರಾನ್ ನ ಈ ಅನಿರೀಕ್ಷಿತ ನಿರ್ಧಾರದಿಂದಾಗಿ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಭಾರಿ ಹೊಡೆತ ಬಿದ್ದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























