32 ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್ ಹಮಾಸ್ ಸಂಘರ್ಷ: ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 10,328ಕ್ಕೆ ಏರಿಕೆ

ಇಸ್ರೇಲ್ ಹಮಾಸ್ ಸಂಘರ್ಷವು 32 ನೇ ದಿನಕ್ಕೆ ಕಾಲಿಟ್ಟಿದೆ.
ಹಮಾಸ್ ಜೊತೆಗಿನ ಯುದ್ಧದ ಮಧ್ಯೆ ಇಸ್ರೇಲ್ ಅನಿರ್ದಿಷ್ಟ ಅವಧಿಗೆ ಗಾಝಾದಲ್ಲಿ “ಒಟ್ಟಾರೆ ಭದ್ರತಾ ಜವಾಬ್ದಾರಿ” ಹೊಂದಿರುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದು ಸುಮಾರು 2.3 ಮಿಲಿಯನ್ ಫೆಲೆಸ್ತೀನೀಯರಿಗೆ ನೆಲೆಯಾಗಿರುವ ಕರಾವಳಿ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಇಸ್ರೇಲ್ ಯೋಜಿಸಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.
ಎಬಿಸಿ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ, ನೆತನ್ಯಾಹು ಅವರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್ ವಶಪಡಿಸಿಕೊಂಡ 240 ಕ್ಕೂ ಹೆಚ್ಚು ಸೆರೆಯಾಳುಗಳಲ್ಲಿ ಕೆಲವರನ್ನು ಬಿಡುಗಡೆ ಮಾಡಲು ಅನುಕೂಲವಾಗುವಂತೆ ಹೋರಾಟದಲ್ಲಿ “ಸಣ್ಣ ವಿರಾಮಗಳಿಗೆ” ಮುಕ್ತತೆಯನ್ನು ನೀಡುವ ಬಗ್ಗೆ ಹೇಳಿಕೆ ನೀಡಿದರು.
ಆದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯಾವುದೇ ಸಾರ್ವತ್ರಿಕ ಕದನ ವಿರಾಮವನ್ನು ಅವರು ತಳ್ಳಿಹಾಕಿದ್ದಾರೆ. ಮಾನವೀಯ ಕದನ ವಿರಾಮಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಅವರ ಕರೆಗೆ ಇಸ್ರೇಲ್‌ನಿಮ್ದ ಯಾವುದೇ ಸ್ಪಂದನ ನೆ ಸಿಕ್ಕಿಲ್ಲ ಎಂದು ಶ್ವೇತಭವನ ಹೇಳಿದೆ.