ಇಸ್ರೇಲ್-ಹಮಾಸ್ ಯುದ್ಧ: ನ್ಯೂಯಾರ್ಕ್‌ ‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ

24/10/2023

ಇಸ್ರೇಲ್ – ಫೆಲೆಸ್ತೀನ್ ಸಂಘರ್ಷದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಸಿಕ ಸಭೆ ಮಂಗಳವಾರ ನಿಗದಿಯಾಗಿದೆ. ಅದರಲ್ಲಿ ಭಾಗವಹಿಸಲು ಹಲವಾರು ಸಚಿವರು ನ್ಯೂಯಾರ್ಕ್ಗೆ ಹಾರುತ್ತಿದ್ದಾರೆ. ಇಸ್ರೇಲ್‌ನಲ್ಲಿ ಹಮಾಸ್ ದಾಳಿ ಮತ್ತು ನಾಗರಿಕರ ವಿರುದ್ಧದ ಹಿಂಸಾಚಾರವನ್ನು ಖಂಡಿಸುವ ಮತ್ತು ಇಸ್ರೇಲ್‌ನ ಆತ್ಮರಕ್ಷಣೆಯ ಹಕ್ಕನ್ನು ಪುನರುಚ್ಚರಿಸುವ ನಿರ್ಣಯವನ್ನು ಅಂಗೀಕರಿಸಲು ಯುಎಸ್ ಒತ್ತಾಯಿಸುತ್ತಿದೆ.

ಮಂಗಳವಾರದ ಸಭೆಯಲ್ಲಿ ಇಸ್ರೇಲ್, ಫೆಲೆಸ್ತೀನ್, ಇರಾನ್, ಜೋರ್ಡಾನ್, ಫ್ರಾನ್ಸ್ ಮತ್ತು ಬ್ರೆಜಿಲ್ ವಿದೇಶಾಂಗ ಸಚಿವರು ಸೇರಿದ್ದಾರೆ ಎಂದು ಕೌನ್ಸಿಲ್ ರಾಜತಾಂತ್ರಿಕರು ತಿಳಿಸಿದ್ದಾರೆ. “ಮಾನವೀಯ ಕದನ ವಿರಾಮ”ಕ್ಕೆ ಕರೆ ನೀಡಿದ ಮತ್ತು ಎಲ್ಲಾ ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುವ ರಷ್ಯಾ ಪ್ರಸ್ತಾಪಿಸಿದ ನಿರ್ಣಯದಲ್ಲಿ ಹಮಾಸ್ ದಾಳಿಯನ್ನು ಉಲ್ಲೇಖಿಸಲಾಗಿಲ್ಲ. 15 ಸದಸ್ಯರ ಮಂಡಳಿಯ ಅನುಮೋದನೆಗೆ ಅಗತ್ಯವಿರುವ ಕನಿಷ್ಠ ಒಂಬತ್ತು “ಹೌದು” ಮತಗಳನ್ನು ಪಡೆಯಲು ಅದು ವಿಫಲವಾಗಿದೆ ಎನ್ನಲಾಗಿದೆ.

ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ರಷ್ಯಾದ ಬೇಡಿಕೆಯು ಯುಎಸ್ ಕರಡು ನಿರ್ಣಯದಲ್ಲಿನ ಒಂದು ವಿಷಯವಾಗಿದೆ ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version