ಗಾಝಾ ನಗರವನ್ನು ಸಂಪೂರ್ಣ ಮುತ್ತಿಗೆ ಹಾಕಲು ಮುಂದಾದ ಇಸ್ರೇಲ್: ಯುದ್ಧಕ್ಕೆ ವಿರಾಮ ನೀಡುವಂತೆ ಅಮೆರಿಕ ಒತ್ತಾಯ

04/11/2023

ಹಮಾಸ್ ಅನ್ನು ನಾಶಪಡಿಸುವ ಗುರಿಯಲ್ಲಿರುವ ಇಸ್ರೇಲ್ ಜೊತೆಗೆ ಫೆಲೆಸ್ತೀನ್ ನಾಗರಿಕರನ್ನು ರಕ್ಷಿಸಲು‌ ಮುಂದಾಗಿ ಎಂದು ಇಸ್ರೇಲ್ ನಾಯಕರನ್ನು ಒತ್ತಾಯಿಸಿದ ನಂತರ ಯುಎಸ್ ಉನ್ನತ ರಾಜತಾಂತ್ರಿಕ ಆಂಟನಿ ಬ್ಲಿಂಕೆನ್ ಮಾತುಕತೆ ಯಶಸ್ವಿಯಾಗದೇ ಅಮೆರಿಕಕ್ಕೆ ತೆರಳಿದ್ದಾರೆ.
ಇನ್ನು ಅವರು ನೆರೆಯ ಜೋರ್ಡಾನ್‌ನಲ್ಲಿ ಐದು ಅರಬ್ ದೇಶಗಳ ವಿದೇಶಾಂಗ ಮಂತ್ರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಂಘರ್ಷದಿಂದ ಗಾಝಾ ನಾಗರಿಕರ ಸಾವಿನ ಸಂಖ್ಯೆಯ ಬಗ್ಗೆ ಹೆಚ್ಚುತ್ತಿರುವ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದ ನಂತರ, ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಾಝಾದ ತೊಂದರೆಗೀಡಾದ ಜನರಿಗೆ ಸಹಾಯವನ್ನು ವಿತರಿಸಲು ಅನುವು ಮಾಡಿಕೊಡಲು “ಮಾನವೀಯ ವಿರಾಮಗಳ” ಕಲ್ಪನೆಯ ಬಗ್ಗೆ ಚರ್ಚಿಸಿದ್ದೇನೆ ಎಂದು ಬ್ಲಿಂಕೆನ್ ಹೇಳಿದರು.

ಪ್ರತಿಯೊಂದು ಪ್ರಯತ್ನಗಳು ನಾಗರಿಕರಿಗೆ ಭದ್ರತೆಯನ್ನು ಹೆಚ್ಚಿಸುವ ಮತ್ತು ಮಾನವೀಯ ನೆರವು ನೀಡಲು ಅನುಮತಿಸುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ಬ್ಲಿಂಕೆನ್ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version