ಗಾಝಾ ಯುದ್ಧವನ್ನು ವಿಸ್ತರಿಸಲು ಇಸ್ರೇಲ್ ಬಯಸುತ್ತಿದೆ: ತುರ್ಕಿ ಅಧ್ಯಕ್ಷರ ಹೇಳಿಕೆ

02/08/2024
ಗಾಝಾದಲ್ಲಿ ನಡೆಯುತ್ತಿರುವ ಯುದ್ಧವು ಅದರ ಆಸುಪಾಸಿನ ರಾಷ್ಟ್ರಗಳಿಗೂ ವ್ಯಾಪಿಸುವುದನ್ನು ಇಸ್ರೇಲ್ ಬಯಸುತ್ತಿದೆ ಎಂದು ತುರ್ಕಿ ಅಧ್ಯಕ್ಷ ಉರ್ದುಗಾನ್ ಹೇಳಿದ್ದಾರೆ. ಕದನ ವಿರಾಮವನ್ನು ಇಸ್ರೇಲ್ ಬಯಸುತ್ತಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಸಂಭಾಷಣೆಯ ನಡುವೆ ಉರ್ದುಗಾನ್ ಹೇಳಿದ್ದಾರೆ.
ಅಮೆರಿಕಾದ ಸಂಸತ್ತನ್ನು ಉದ್ದೇಶಿಸಿ ನೆತಾನ್ಯಾಹು ಮಾಡಿದ ಭಾಷಣ ಜಗತ್ತಿಗೆ ಮತ್ತು ತುರ್ಕಿಗೆ ತೀರ ನಿರಾಷಾಜನಕವಾಗಿತ್ತು ಎಂದು ಉರ್ದುಗನ್ ಹೇಳಿದ್ದಾರೆ. ನೆತನ್ಯಾಹು ಅವರಿಗೆ ಕದನ ವಿರಾಮ ಇಷ್ಟ ಇಲ್ಲ. ಅವರು ಈ ಯುದ್ಧವನ್ನು ವಲಯದ ಆಚೆಗೆ ವಿಸ್ತರಿಸಲು ಬಯಸುತ್ತಿದ್ದಾರೆ ಎಂದು ಉರ್ದು ಗಾನ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth