10:11 AM Saturday 23 - August 2025

ಗಾಝಾದಲ್ಲಿ ಸಂಘಟಿತ ದಾಳಿಗೆ ಇಸ್ರೇಲ್ ಪ್ಲ್ಯಾನ್: 3,500 ದಾಟಿದ ಸಾವಿನ ಸಂಖ್ಯೆ

15/10/2023

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಏಳನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗಾಝಾ ಪಟ್ಟಿಯಲ್ಲಿ ವಾಯು, ನೆಲ ಮತ್ತು ನೌಕಾ ಪಡೆಗಳನ್ನು ಒಳಗೊಂಡ “ಸಂಘಟಿತ” ದಾಳಿಗೆ ಸಿದ್ಧವಾಗಿದೆ ಎಂದು ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಝಾ ಗಡಿಯ ಬಳಿ ಸೈನಿಕರನ್ನು ಭೇಟಿಯಾದ ನಂತರ ಸೇನೆಯು ಈ ಹೇಳಿಕೆ ನೀಡಿದೆ.

ಇಸ್ರೇಲ್ ಆಕ್ರಮಣಕ್ಕೆ ಹೆದರಿ ಸಾವಿರಾರು ಮಂದಿ ಫೆಲೆಸ್ತೀನೀಯರು ಉತ್ತರ ಗಾಝಾದಿಂದ ಪಲಾಯನ ಮಾಡುವುದನ್ನು ಮುಂದುವರಿಸಿದ್ದಾರೆ. ಇನ್ನು ಒಟ್ಟು ಸಾವಿನ ಸಂಖ್ಯೆ 3,500 ದಾಟಿದೆ.

ಫೆಲೆಸ್ತೀನ್ ನ ಗಾಝಾ ಪಟ್ಟಿಯ ಮೇಲೆ ವಾಯು, ನೆಲ ಮತ್ತು ನೌಕಾಪಡೆಗಳನ್ನು ಒಳಗೊಂಡ ‘ಸಂಘಟಿತ’ ದಾಳಿಗೆ ಸಿದ್ಧ ಎಂದು ಇಸ್ರೇಲ್ ಸೇನೆ ಘೋಷಿಸಿದೆ. “ವ್ಯಾಪಕ ಶ್ರೇಣಿಯ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದೆ” ಎಂದು ಇಸ್ರೇನ್ ಸೇನೆ ಹೇಳಿದೆ. ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಇಸ್ರೇಲ್ 10,000 ಸೈನಿಕರನ್ನು ಕಳುಹಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಹಮಾಸ್ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೆ ಮತ್ತೆ ತೋರಿಸಿದೆ. ಹೀಗಾಗಿ ಐಡಿಎಫ್ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಎದುರಿಸಲು ಸಿದ್ಧವಾಗಿದೆ. “ಭಯೋತ್ಪಾದನೆಗೆ ಜಗತ್ತಿನಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

ಇತ್ತೀಚಿನ ಸುದ್ದಿ

Exit mobile version