ಗಾಜಾ ಮಹಿಳೆಯರ ಒಳ ಉಡುಪಿನೊಂದಿಗೆ ಇಸ್ರೇಲ್ ಸೈನಿಕರ ಆಟ: ವಿಶ್ವಾದ್ಯಂತ ಭಾರೀ ಟೀಕೆ

Israeli soldiers
29/03/2024

ಗಾಜಾದಲ್ಲಿ ಇಸ್ರೇಲ್ ಯೋಧರ ಅತಿರೇಕದ ವರ್ತನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಸ್ರೇಲ್ ಸೈನಿಕರು ಗಾಜಾದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನಗಳು ಬಲಗೊಳ್ಳಲು ಕಾರಣವಾಗಿದೆ.

ಇಸ್ರೇಲ್ ಸೈನಿಕರೇ ಹಂಚಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಓರ್ವ ಸೈನಿಕ ಮಹಿಳೆಯೋರ್ವರ ಒಳ ಉಡುಪನ್ನು ಎತ್ತಿಹಿಡಿದು ಇನ್ನೋರ್ವ ಸೈನಿಕನ ಮೂಗಿಗೆ ಮೂಸುವಂತೆ ಹಿಡಿಯುತ್ತಿರುವ ವಿಕೃತ ಚಿತ್ರ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಸ್ರೇಲ್ ಸೈನಿಕರು ಪ್ಯಾಲೆಸ್ತೀನ್ ನ ಭಾಗವಾದ ಗಾಜಾ ಪಟ್ಟಿಯ ಮನೆಯೊಂದಕ್ಕೆ ನುಗ್ಗುತ್ತಾರೆ. ಆ ಮನೆಯ ಬೆಡ್ ರೂಮ್ ನಲ್ಲಿ ಸಿಕ್ಕಿದ ಮಹಿಳೆಯ ಒಳ ಉಡುಪಿನೊಂದಿಗೆ ವಿಕೃತ ರೀತಿಯಲ್ಲಿ ಫೋಟೋ ತೆಗೆದು ವೈರಲ್ ಮಾಡಿದ್ದಾರೆ.

ಪ್ಯಾಲೆಸ್ತೀನ್ ನ ಭಾಗವಾಗಿದ್ದ ಗಾಜಾ ಪಟ್ಟಿಯಲ್ಲಿ ಧ್ವಂಸವಾದ ಮನೆಗಳು ಹಾಗೂ ಅಂಗಡಿಗಳಲ್ಲಿ ಸಿಕ್ಕ ಮಹಿಳೆಯರ ಒಳ ಉಡುಪು, ಗೊಂಬೆಗಳನ್ನು ಹಿಡಿದುಕೊಂಡು ಇಸ್ರೆಲ್ ಸೈನಿಕರು ತಮಾಷೆ ಮಾಡುವಂತಹ ವಿಡಿಯೋಗಳನ್ನು ಹರಿಯ ಬಿಡುತ್ತಿದ್ದಾರೆ.

ಇನ್ನೂ ಈ ಸಂಬಂಧ ಇಸ್ರೇಲ್ ಭದ್ರತಾ ಪಡೆ ಕೂಡ ತನಿಖೆ ನಡೆಸುವುದಾಗಿ ಹೇಳಿದ್ದು, ನಾವು ಸೈನಿಕರಿಂದ ಗೌರವಯುತ ನಡವಳಿಕೆಗಳನ್ನು ನಿರೀಕ್ಷಿಸುತ್ತೇವೆ ಮತ್ತು ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version