ಪಾರ್ಟಿಯ ನೇತಾರರೇ ನನ್ನ ಸೋಲಿಸಿದರು | ಡಿ. 6 ರ ಬಳಿಕ ಅವರ ಪಾಪದ ಕೆಲಸ ಹೇಳ್ತೀನಿ: ಮಾಜಿ ಸಚಿವ ಸೋಮಣ್ಣ

somanna
24/11/2023

ಚಾಮರಾಜನಗರ: ಕಾಂಗ್ರೆಸ್ ನವರು ನನ್ನನ್ನು ಸೋಲಿಸಿಲ್ಲ, ನಮ್ಮ ಪಾರ್ಟಿಯ ಮಹಾ ನೇತಾರರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು.

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಅವರು ಮಾಧ್ಯಮವರೊಟ್ಟಿಗೆ ಮಾತನಾಡಿ, ನಮ್ಮ ಪಾರ್ಟಿಯ ಮಹಾನ್ ನೇತಾರರು ಎನಿಸಿಕೊಂಡವರು, ಜೊತೆಯಲ್ಲಿದ್ದವರು ನನ್ನನ್ನು ಸೋಲಿಸಿದರು, ಅವರ ಎಲ್ಲಾ ಪಾಪದ ಕೆಲಸವನ್ನು ವರಿಷ್ಠರಿಗೆ ಹೇಳುತ್ತೇನೆ ಎಂದರು.

6 ರ ತನಕ ನಾನು ಏನೂ ಮಾತನಾಡಲ್ಲ, ಒಂದಂತೂ ಸತ್ಯ ರಾಜಕೀಯ ನಿಂತ ನೀರಲ್ಲ, ನನಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಟ್ಟವರಿಗೆಲ್ಲ ಉತ್ತರ 6 ನೇ ತಾರೀಕು ಕೊಡ್ತಿನಿ, ನಾನು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ, ತಪ್ಪು ಮಾಡಿದಬರನ್ನು ಅರ್ಥೈಸುವ ಕೆಲಸ ಮಾಡುತ್ತೇನೆ, 6 ರ ಬಳಿಕ ವರಿಷ್ಠರಿಗೆ ಎಲ್ಲಾವನ್ನೂ ಹೇಳುತ್ತೇನೆ ಎಂದರು. ಸೋಮನಹಳ್ಳಿ ಮುದುಕಿ ಕತೆ ಥರಾ ನಾನು ಆಗಲ್ಲ, ಎಲ್ಲದಕ್ಕೂ ನನ್ನಿಂದಲೇ ಎಂದರೇ ಅದು ಭ್ರಮೆ ಆ ರೀತಿ ನಾನಾಗಲ್ಲ ಎಂದು ಯಾರಾ ಹೆಸರು ಹೇಳದೇ ಕುಟುಕಿದರು.

ಇತ್ತೀಚಿನ ಸುದ್ದಿ

Exit mobile version