ಇಸ್ರೇಲ್ ನ ಜೈಲ್‌ನಲ್ಲಿರುವ ಫೆಲೆಸ್ತೀನಿ ಕಾದಂಬರಿಕಾರನಿಗೆ ಅಂತಾರಾಷ್ಟ್ರೀಯ ಪುರಸ್ಕಾರ ಪ್ರಕಟ

02/05/2024

ಎರಡು ದಶಕಗಳಿಂದ ಇಸ್ರೇಲ್ ನ ಜೈಲ್‌ನಲ್ಲಿರುವ ಫೆಲೆಸ್ತೀನಿ ಕಾದಂಬರಿಕಾರ ಬಾಸಿಮ್ ಖಂದಕ್ ಜಿಕ್ ಅವರಿಗೆ ಅರಬ್ ಸಾಹಿತ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಪುರಸ್ಕಾರವನ್ನು ಘೋಷಿಸಲಾಗಿದೆ. ಎ ಮಾಸ್ಕ್ ಕಲರ್ ಆಫ್ ದಿ ಸ್ಕೈ ಎಂಬ ಅವರ ಕಾದಂಬರಿಗೆ ಈ ಪುರಸ್ಕಾರ ಲಭಿಸಿದೆ.

ಈ ಕಾದಂಬರಿಯ ಪ್ರಕಾಶಕರಾದ ಇದ್ರಿಸ್ ಅವರು ಬಾಸಿಮ್ ಪರವಾಗಿ ಈ ಪುರಸ್ಕಾರವನ್ನು ಸ್ವೀಕರಿಸಿದ್ದಾರೆ. ಅಬುದಾಬಿಯಲ್ಲಿ ಈ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದೆ.

ಫೆಲೆ ಸ್ತೀನಿನ ರಮಲ್ಲಾದ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿರುವ ಪುರಾತತ್ವ ಸಂಶೋಧಕನಾದ ನೂರ್ ಎಂಬ ವ್ಯಕ್ತಿಗೆ ಇಸ್ರೇಲ್ ವ್ಯಕ್ತಿಯ ಕೋಟಿನ ಜೇಬಿನಲ್ಲಿ ಸಿಗುವ ಹಸಿರು ಬಣ್ಣದ ಐಡೆಂಟಿಟಿ ಕಾರ್ಡನ್ನು ಆಧಾರವಾಗಿಸಿ ಬಾಸಿಂ ಅವರು ಕಾದಂಬರಿಯನ್ನು ರಚಿಸಿದ್ದಾರೆ. ನಾನು ಇಸ್ರೇಲ್ ನಾಗರಿಕ ಎಂದು ನಟಿಸಿ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಉತ್ಕನನ ಮಾಡಲಾಗುತ್ತಿರುವ ಪ್ರದೇಶಕ್ಕೆ ತೆರಳುವುದಕ್ಕೆ ನೂರ್ ಈ ಐಡೆಂಟಿಟಿ ಕಾರ್ಡನ್ನು ಬಳಸುತ್ತಾರೆ. ಬೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ನಾಗರಿಕನಾಗಿ ಮತ್ತು ಫೆಲಸ್ತೀನಿ ನಾಗರಿಕನಾಗಿ ದೈನಂದಿನ ಜೀವನದಲ್ಲಿ ನೂರ್ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಘಟನೆಗಳ ಸುತ್ತ ಈ ಕಾದಂಬರಿ ರಚನೆಗೊಂಡಿದೆ.

1983 ರಲ್ಲಿ ಜನಿಸಿರುವ ಇವರು ನಬ್ ಲಸ್ ಯೂನಿವರ್ಸಿಟಿಯಿಂದ ಜರ್ನಲಿಸಂ ಪದವಿ ಪಡೆದಿದ್ದಾರೆ. 20 ವರ್ಷಗಳ ಹಿಂದೆ 21ರ ಹರೆಯದ ವ್ಯಕ್ತಿಯಾಗಿದ್ದಾಗ ಇಸ್ರೇಲ್ ಇವರನ್ನು ಬಂಧಿಸಿತು. ಟೆಲ್ ಅವೀವ್ ನಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಇವರ ಮೇಲೆ ಇಸ್ರೇಲ್ ಆರೋಪ ಹೊರಿಸಿದೆ. ಜೈಲಿನಿಂದಲೇ ಇವರು ಪೊಲಿಟಿಕಲ್ಗೆ ಸಂಬಂಧಿಸಿ ಆನ್ಲೈನ್ ನಲ್ಲಿ ಪದವಿ ಪಡೆದಿದ್ದಾರೆ..ಈ ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಇವರು 2023ರಲ್ಲಿ ರಚಿಸಿದ್ದಾರೆ.ಒಟ್ಟು 133 ಪುಸ್ತಕಗಳು ಈ ಪುರಸ್ಕಾರಕ್ಕಾಗಿ ಸ್ಪರ್ಧೆಯಲ್ಲಿ ಇದ್ದವು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version