9:06 PM Wednesday 10 - December 2025

ಹೊಸ ಪಕ್ಷ: ಇನ್ನು 3 ದಿನ ಕಾಯಿರಿ, ಯಾರು ಬರ್ತಾರೆ, ಯಾರು ಜೊತೆ ಇರ್ತಾರೆ ತಿಳಿಯುತ್ತದೆ: ಜನಾರ್ದನ ರೆಡ್ಡಿ

janardhana reddy
22/12/2022

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಇದೇ ವೇಳೆ ಹೊಸ ಪಕ್ಷ ಸ್ಥಾಪನೆಗೆ ಅವರು ಮುಂದಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ, ತಮ್ಮ ರಾಜಕೀಯ ನಡೆಯ ಬಗ್ಗೆ ತಿಳಿದುಕೊಳ್ಳಲು ಡಿಸೆಂಬರ್ 25ರವರೆಗೆ ಕಾಯಿರಿ ಅನ್ನೋ ಸಂದೇಶವನ್ನು ಅವರು ನೀಡಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಮಾತನಾಡಿದ ಅವರು,  ನಾನು ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಸಾರ್ವಜನಿಕ ಜೀವನ ಆರಂಭಕ್ಕಾಗಿ ಶ್ರಮಿಸುತ್ತಿದ್ದೇನೆ. ನನ್ನ ಜೊತೆಗೆ ಯಾರು ಇರುತ್ತಾರೆ, ಯಾರು ಬರುತ್ತಾರೆ ಅನ್ನೋದನ್ನು ಡಿ.25ರಂದು ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್  25ನೇ ತಾರೀಖಿನಂದು ಮಹನೀಯರು(ವಾಜಪೇಯಿ) ಜನಿಸಿದ ದಿನವಾಗಿದೆ. ಇನ್ನು ಮೂರು ದಿನದಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version