ಏರ್‌ ಟೆಲ್ ಮತ್ತು ಜಿಯೋ ಗ್ರಾಹಕರಿಗೆ ಶಾಕ್: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸೇವಾ ದರ ಏರಿಸುವ ಸಾಧ್ಯತೆ

jio airtel
14/04/2024

ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ ಗಳಾದ ಏರ್‌ ಟೆಲ್ ಮತ್ತು ಜಿಯೋ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ  ತಮ್ಮ ಸೇವಾ ದರ ಏರಿಸುವ ಚಿಂತನೆ ನಡೆಸಿವೆ ಎಂದು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಪರಿಣತರು ವಿಶ್ಲೇಷಣಾ ವರದಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಏಪ್ರಿಲ್ 19 ರಿಂದ ಜೂನ್ 1 ರ ತನಕ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆ ಟೆಲಿಕಾಂ ಸೇವೆಗಳ ಬೆಲೆಗಳಲ್ಲಿ ಶೇಕಡ 15 ರಿಂದ ಶೇಕಡ 17ರಷ್ಟು ಏರಿಕೆಯಾಗಬಹುದು.

ಟೆಲಿಕಾಂ ಸೇವಾ ದರ ಏರಿಕೆ ಯಾಕೆ?

2ಜಿ ಉನ್ನತೀಕರಣ, ಉದ್ಯಮ ಬೆಳವಣಿಗೆ, ಫೈಬರ್ ಟು ಹೋಮ್‌ ನೆಟ್‌ವರ್ಕ್‌, 5 ಜಿ ಸೇವೆ ಆರಂಭಿಸಿದ ಬಳಿಕ ಬಂಡವಾಳ ವೆಚ್ಚದಲ್ಲಿ ಆಗಿರುವ ಕುಸಿತಗಳನ್ನು ಮೀರಿ ಮುಂದಿನ ಮೂರು ವರ್ಷಗಳಲ್ಲಿ ಆದಾಯವನ್ನು ಎರಡು ಪಟ್ಟು ಹೆಚ್ಚಿಸಬೇಕಾದ ಅನಿವಾರ್ಯತೆಯಲ್ಲಿ  ಭಾರ್ತಿ ಏರ್‌ ಟೆಲ್‌ ಇದೆ. ಹೀಗಾಗಿ ಸೇವಾ ದರಗಳ ಏರಿಕೆಯನ್ನು ನಿರೀಕ್ಷಿಸಬಹುದು ಎಂದು ಹೇಳಲಾಗಿದೆ.

ಭಾರ್ತಿ ಏರ್‌ ಟೆಲ್‌ ನ ಬಂಡವಾಳ ವೆಚ್ಚವು 2024– 26ರ ಅವಧಿಯಲ್ಲಿ 75,000 ಕೋಟಿ ರೂಪಾಯಿ ಅಂದಾಜಿಸಲಾಗುತ್ತಿದೆ. 5 ಜಿ ಸೇವೆ ಪರಿಚಯಿಸಿರುವುದರಿಂದ ಟೆಲಿಕಾಂ ಸೆಕ್ಟರ್‌ ನಲ್ಲಿ ಒಂದು ಧನಾತ್ಮಕ ಬದಲಾವಣೆ ಆಗುವುದಾದರೂ, ಬಂಡವಾಳ ವೆಚ್ಚದಲ್ಲಿ ಭಾರಿ ಕಡಿತ ಉಂಟಾಗಲಿದೆ ಎಂದು ವರದಿ ಹೇಳಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version