11:47 PM Saturday 18 - October 2025

ನೂತನ ಅಮೆರಿಕ ಅಧ್ಯಕ್ಷರ ಪತ್ನಿ ಏನು ಮಾಡುತ್ತಿದ್ದಾರೆ ಗೊತ್ತಾ?

09/11/2020

ನ್ಯೂಯಾರ್ಕ್:  ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರು ಘೋಷಣೆಯಾದ ಬೆನ್ನಲ್ಲೇ ಅವರ ಪತ್ನಿ ಜಿಲ್ ಬಿಡನ್ ಅವರು ಸಂಭ್ರಮಾಚರಣೆ ಮಾಡಿದ್ದಾರೆ. 69 ವರ್ಷದ ಜಿಲ್ ಅವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಜೋ ಬಿಡೆನ್-ಜಿಲ್ ಬಿಡೆನ್ ದಂಪತಿ ಬಹಳ ಅನ್ಯೋನ್ಯವಾದ ಸಂಬಂಧವನ್ನು ಹೊಂದಿದ್ದಾರೆ. ತಮ್ಮ ಪತಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಜಿಲ್ ಅವರು ಕೂಡ ವೇದಿಕೆ ಏರಿ ಪ್ರಚಾರ ನಡೆಸಿದ್ದು, ಜೋ ಬಿಡೆನ್ ಅವರಿಗೆ ಎಲ್ಲ ರೀತಿಯಲ್ಲಿಯೂ ಸಾಥ್ ನೀಡಿದ್ದರು.

ಜೋ ಬಿಡೆನ್ ಗೆದ್ದ ಬಳಿಕವೂ,  ಜನರತ್ತ ಕೈ ಬೀಸುವ ತಮ್ಮ ಫೋಟೋವನ್ನು ಹಂಚಿಕೊಂಡು, “ನಮ್ಮ ಎಲ್ಲರ ಕುಟುಂಬದ ಅಧ್ಯಕ್ಷರಾಗಲಿದ್ದಾರೆ” ಎಂದು ಹೇಳಿದ್ದಾರೆ. ಜಿಲ್ ಬಿಡೆನ್ ಅಂದ್ರೆ ಇಷ್ಟೇ ಅಲ್ಲ, ಅವರೊಬ್ಬರು ಇಂಗ್ಲಿಷ್ ಪ್ರೊಫೆಸರ್, ಒಂದಲ್ಲ, ನಾಲ್ಕು ಪದವಿಗಳನ್ನು ಅವರು ಪಡೆದಿದ್ದಾರೆ.  ಶಿಕ್ಷಣದಲ್ಲಿ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ಉತ್ತರ ವರ್ಜೀನಿಯಾದ ಕಮ್ಯುನಿಟಿ ಕಾಲೇಜ್ ಪ್ರೊಫೆಸರ್ ಆಗಿದ್ದಾರೆ.

ಜೋಬಿಡೆನ್ ಹಾಗೂ ಜಿಲ್ 1977ರ ಜೂನ್ 17ರಂದು ನ್ಯೂಯಾರ್ಕ್ ನಲ್ಲಿ ವಿವಾಹವಾದರು.  ಈ ದಂಪತಿಯು 1981ರಲ್ಲಿ ಓರ್ವಳು ಮಗಳಿಗೆ ಜನ್ಮ ನೀಡಿದ್ದಾರೆ. ಆಕೆಯ ಹೆಸರು ಅಶ್ಲೀಬ್ಲಾಝರ್ ಎಂದು. ಅಂತೂ ಇಷ್ಟೊಂದು ಅನ್ಯೋನ್ಯತೆ ಹೊಂದಿರುವ ಕುಟುಂಬ ರಾಜಕಾರಣಿಗಳಿಗೆ ಮಾದರಿ ಕೂಡ.

ಇತ್ತೀಚಿನ ಸುದ್ದಿ

Exit mobile version