ಜ್ಯೋತಿಷಿಯ ಮಾತು ನಂಬಿ ಅಪ್ಪ-ಅಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ 14ರ ಬಾಲಕ

bangalore
08/05/2021

ಬೆಂಗಳೂರು: ಜ್ಯೋತಿಷಿಯ ಮಾತು ನಂಬಿದ 14 ವರ್ಷದ ಬಾಲಕನೋರ್ವ ತನ್ನ ತಂದೆ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು,  ದಂಪತಿಯ ಕೊಲೆ ಪ್ರಕರಣದ ಹಿಂದಿನ ಸತ್ಯ ಇದೀಗ ಬಯಲಾಗಿದೆ.

ನಿನ್ನ ತಂದೆ ತಾಯಿ ಇರುವವರೆಗೆ ನಿನಗೆ ಒಳ್ಳೆಯ ದಿನ ಬರುವುದಿಲ್ಲ ಎಂದು ಜ್ಯೋತಿಷಿ ಹೇಳಿದ್ದು, ಇದರಿಂದಾಗಿ 14 ವರ್ಷದ ಬಾಲಕನ ತಲೆಯೊಳಗೆ ಮನುವಾದಿ ಮನಸ್ಥಿತಿ ಸೃಷ್ಟಿಯಾಗಿದೆ. ಇದೇ ಮನಸ್ಥಿತಿ ತಂದೆ-ತಾಯಿಯ ಹತ್ಯೆಗೂ ಹೇಸಲಿಲ್ಲ ಎಂದು ತಿಳಿದು ಬಂದಿದೆ.

ಪೀಣ್ಯದ ಕರಿಹೋಬನಹಳ್ಳಿಯ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿಯ ಕಗ್ಗೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.  ಈ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರಿಗೆ. ಮಗನೇ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. 14 ವರ್ಷದ ಬಾಲಕ ಜ್ಯೋತಿಷಿಯ ಮಾತು ಕೇಳಿ ತನ್ನ ಅಪ್ಪ-ಅಮ್ಮನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಪುತ್ರ ಹಾಗೂ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version