ಡಾ.ಸುಧಾಕರ್ ಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ, ಸೋಲಿಸಲು ಸಿದ್ಧವಾದ ಶಾಸಕ ಪ್ರದೀಪ್ ಈಶ್ವರ್!

pradeep eshwar
25/03/2024

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ.ಸುಧಾಕರ್ ಗೆ ಬಿಜೆಪಿ ಟಿಕೆಟ್ ನೀಡಿದೆ. ಅತ್ತ ಸುಧಾಕರ್ ಗೆ ಟಿಕೆಟ್ ಘೋಷಣೆ ಆಗ್ತಿದಂತೆ ಇತ್ತ  ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಫುಲ್ ಆ್ಯಕ್ಟಿವ್ ಆಗಿದ್ದು, ಸುಧಾಕರ್ ಅವರನ್ನು ಮತ್ತೊಮ್ಮೆ ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರದೀಪ್ ಈಶ್ವರ್,  ಸುಧಾಕರ್ ಗೆ ಟಿಕೆಟ್ ನೀಡಿರುವುದು ಪ್ರಜಾಪ್ರಬುತ್ವ ಸಾಯೋದಕ್ಕೆ ಮುನ್ನುಡಿ ಆಗ್ತಿದೆ ಅನ್ನಿಸಿತು ಎಂದು ಹೇಳಿದರು.

ಸುಧಾಕರ್ ಅವರ ಮೇಲೆ ಕೋವಿಡ್ ಸಮಯದಲ್ಲಿ 2,200 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಇದೆ. ಅಲ್ಲದೇ ಸಾಮಾನ್ಯ ಕೋಚಿಂಗ್ ಸೆಂಟರ್ ಹುಡುಗನ ಮುಂದೆ ಸೋತಿದ್ದರೂ, ಹೇಗೆ ಟಿಕೆಟ್ ಸಿಕ್ಕಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ನಾಯಕರ ಮುಂದೆ ದೀರ್ಘ ದಂಡ ನಮಸ್ಕಾರ ಮಾಡಿರುವ ಕಾರಣಕ್ಕೆ ಟಿಕೆಟ್ ಸಿಕ್ಕಿರಬಹುದು, ನಾನು ಸಂಪಾದಿಸಿರುವ ನನ್ನ ಆದಾಯ, ಆಸ್ತಿ ಎಲ್ಲವನ್ನೂ ಸಾರ್ವಜನಿಕವಾಗಿ ತೆರೆದಿಡುತ್ತೇನೆ, ನನ್ನ ಆಸ್ತಿ ಎಷ್ಟಿದೆ ಎಂದು ಹೇಳ್ತೀನಿ, ನೀವು ಹೇಳ್ತೀರಾ ಎಂದು ಸವಾಲು ಹಾಕಿದರು.

ಯಾವುದೇ ಕಾರಣಕ್ಕೂ ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ  ಪ್ರದೀಪ್,  ಇಡೀ ಕೇಂದ್ರ ಸರ್ಕಾರವೇ ಬಂದು ನಿಂತ್ರೂ ಗೆಲ್ಲಲು ಬಿಡಲ್ಲ ಎಂದು ಸವಾಲು ಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version