ಚಿಕಿತ್ಸೆ ನೀಡಲೂ ಡಾಕ್ಟ್ರಿಲ್ಲ, ಸತ್ತರೂ ಡಾಕ್ಟ್ರಿಲ್ಲ: ಕಳಸ ತಾಲೂಕು ಆಸ್ಪತ್ರೆಯ ದುಸ್ಥಿತಿ ಇದು!

ಚಿಕ್ಕಮಗಳೂರು : ಕಳಸ ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರ ಪರದಾಡುತ್ತಿದ್ದು, ಇದೀಗ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡಾಕ್ಟ್ರಿಲ್ಲ…! ಎಂದು ಸಿಬ್ಬಂದಿ ಹೇಳಿದ್ದಾರೆ.
ಡಾಕ್ಟ್ರಿಗೆ ಜನ ಕಾಯಬಹುದು, ಜೀವ ಕಾಯ್ತದಾ? ವ್ಯಕ್ತಿಯ ಪ್ರಾಣವೇ ಹೊರಟು ಹೋಗಿದೆ. ಅತ್ತ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದರೆ ಅದಕ್ಕೂ ಡಾಕ್ಟ್ರಿಲ್ಲ, ಇಂತಹ ದುಸ್ಥಿತಿ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಮಧ್ಯಾಹ್ನದವರೆಗೆ ಮರಣೋತ್ತರ ಪರೀಕ್ಷೆಗಾಗಿ ಕುಟುಂಬಸ್ಥರು ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ, ಕೊನೆಗೆ ಬೇರೆ ಯಾವುದೇ ಉಪಾಯವಿಲ್ಲದೇ ಮೃತದೇಹವನ್ನು ಮನೆಗೆ ಸಾಗಿಸಿದ್ದಾರೆ.
ಹೊರನಾಡು ಗ್ರಾಮದ ವ್ಯಕ್ತಿ ರವಿ ಎಂಬವರು ಮೃತಪಟ್ಟವರಾಗಿದ್ದಾರೆ. ಕಳಸ ತಾಲೂಕು ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ರೋಗಿಗಳ ಪರದಾಡುತ್ತಿದ್ದಾರೆ., ಖಾಯಂ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ತಾಲೂಕಿನ ಜನರು ಸಣ್ಣ–ಪುಟ್ಟ ಚಿಕಿತ್ಸೆಗೂ ಬೇರೆ ತಾಲೂಕಿಗೆ ಹೋಗಬೇಕಾದ ದುಸ್ಥಿತಿ ಸೃಷ್ಟಿಯಾಗಿದೆ. ಹೆರಿಗೆಗೆ ಬಂದವರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬೇರಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಸ್ಥಳೀಯ ಶಾಸಕಿ ನಯನ ಮೋಟಮ್ಮ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD