9:46 AM Thursday 16 - October 2025

ಕಲಾವಿದರಿಗೆ ಸಿಹಿ ಸುದ್ದಿ: ಸಹಾಯ ಧನಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ

27/11/2020

ಕೊಪ್ಪಳ: ನಾಡಿನ ಕಲೆ, ಸಾಹಿತ್ಯ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಸಕ್ತ ಸಾಲಿನ ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಸಹಾಯಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ನೋಂದಾಯಿತ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಏರ್ಪಡಿಸುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಅಸಂಘಟಿತ ತಂಡಗಳು/ಏಕವ್ಯಕ್ತಿ ಕಲಾವಿದರಿಗೆ ವಾದ್ಯ ಪರಿಕರ/ವೇಷಭೂಷಣಗಳ ಖರೀದಿಗೆ, ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ/ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ಸಹಾಯಧನ ನೀಡಲಾಗುತ್ತದೆ.


ಅರ್ಜಿ ಸಲ್ಲಿಸಲು ಡಿ.27 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಸೇವಾಸಿಂಧು ವೆಬ್‌ಸೈಟ್ www.sevasindhu.karnataka.gov.in ಮುಖಾಂತರ ಸಲ್ಲಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್‌ ಸೈಟ್ www.kannadasiri.gov.in ನಲ್ಲಿ ವೀಕ್ಷಿಸಬಹುದು. ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ದೂ.ಸಂ. 080-22230282/080-22279954 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರಾದ ನೀಲಕಂಠಪ್ಪ ಕಂಬಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version