12:07 PM Monday 15 - December 2025

ಕಳ್ಳನಿಂದ ವಶಪಡಿಸಿಕೊಂಡ ಮೊಬೈಲ್ ನಲ್ಲಿತ್ತು ಆ ವಿಡಿಯೋ | ವಿಡಿಯೋ ನೋಡಿ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ ಪೊಲೀಸರು

08/01/2021

ಭೋಪಾಲ್: ಮೊಬೈಲ್ ಕಳ್ಳತನ ಪ್ರಕರಣದಿಂದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಸಿನಿಮೀಯ ಘಟನೆಯೊಂದು  ನಡೆದಿದೆ.  ಜನವರಿ 2ರಂದು 18 ವರ್ಷದ ಯುವತಿಯೊಬ್ಬಳು ತನ್ನ ಬೆಳ್ಳಿ ಆಭರಣಗಳು, ನಗದು ಹಾಗೂ ತನ್ನ ಮೊಬೈಲ್ ಕಳವು ಆಗಿರುವುದಾಗಿ ದೂರು ನೀಡಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.  ಬಂಧನದ ವೇಳೆ ಯುವತಿಯ ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಯುವತಿಯ ಮೊಬೈಲ್ ನ್ನು ಪರಿಶೀಲನೆ ನಡೆಸಿದ ವೇಳೆ ಯುವತಿ ಮುಚ್ಚಿಟ್ಟ ವಿಚಾರವೊಂದು ಪೊಲೀಸರಿಗೆ ತಿಳಿದು ಬಂದಿದೆ.

ಯುವತಿಯ ಮೊಬೈಲ್ ಪರಿಶೀಲಿಸುತ್ತಿದ್ದ ಪೊಲೀಸರಿಗೆ ಮೊಬೈಲ್ ನಲ್ಲಿ ಸಾಮೂಹಿಕ ಅತ್ಯಾಚಾರದ ವಿಡಿಯೋ ದೊರಕಿದೆ. ಕಳ್ಳತನದ ದೂರು ನೀಡಿದ್ದ ಯುವತಿಯೇ ಆ ವಿಡಿಯೋದಲ್ಲಿ ಸಂತ್ರಸ್ತೆ ಎಂದು ಆ ಬಳಿಕ ತಿಳಿದು ಬಂದಿದೆ.

ಭೋಪಾಲ್ ನಿಂದ 186 ಕಿ.ಮೀ. ದೂರದ ಸಾಗರ ಜಿಲ್ಲೆಯಲ್ಲಿ ಜನವರಿ 1ರಂದು 18 ವರ್ಷದ ಸಂತ್ರಸ್ತ ಯುವತಿ ತನ್ನ ಸಹೋದರ ಮಾವನೊಂದಿಗೆ ಅಮ್ಮಿರಾಕ್ಕೆ ತೆರಳಿದ್ದು, ದೇವಸ್ಥಾನದಿಂದ ಹಿಂದಿರುಗುವ ವೇಳೆ ದುಷ್ಕರ್ಮಿಗಳ ತಂಡ ಯುವತಿಯ ಮಾವನಿಗೆ ಥಳಿಸಿ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು.  ಈ ವಿಡಿಯೋ ಕಳವಾದ ಮೊಬೈಲ್ ನಲ್ಲಿ ಸೆರೆಯಾಗಿತ್ತು.

ಮರ್ಯಾದೆಗೆ ಅಂಜಿ ಯುವತಿಯು ಅತ್ಯಾಚಾರ ನಡೆದ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ ಆಕೆಯ ಮೊಬೈಲ್ ಕಳವು ಆಗಿರುವುದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೊಬೈಲ್ ಕಳ್ಳರ ಜೊತೆಗೆ ಇಬ್ಬರು ಅತ್ಯಾಚಾರ ಆರೋಪಿಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version