10:40 AM Tuesday 14 - October 2025

ಸಭೆಯಲ್ಲಿ ರೋಷಾವೇಷ: ಅಧಿಕಾರಿ ಮೇಲೆ ಕಡತ ಎಸೆದ ಮಹಿಳಾ ಮೇಯರ್

14/06/2024

ಕಾನ್ಪುರದ ಮೇಯರ್ ಪ್ರಮೀಳಾ ಪಾಂಡೆ ಅವರು ಪುರಸಭೆಯ ಸಭೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಕಡತವನ್ನು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಳಚರಂಡಿ ವ್ಯವಸ್ಥೆಗಳ ಸ್ವಚ್ಛತೆ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಕಾನ್ಪುರ ನಗರ ನಿಗಮದ ಸಭೆಯಲ್ಲಿ ಮೇಯರ್ ಪ್ರಮೀಳಾ ಪಾಂಡೆ ಭಾಗವಹಿಸಿದ್ದರು. ಚರಂಡಿ ಸ್ವಚ್ಛಗೊಳಿಸುವಲ್ಲಿನ ನಿರ್ಲಕ್ಷ್ಯದ ಬಗ್ಗೆ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ವಲಯ 3ರ ಕಾರ್ಯನಿರ್ವಾಹಕ ಎಂಜಿನಿಯರ್ ನಾನಕ್ ಚಂದ್ ಅವರು ಮಾರ್ಚ್ ತಿಂಗಳ ವರದಿಯನ್ನು ಮಂಡಿಸಿದಾಗ, ಮೇಯರ್ ಕೋಪಗೊಂಡು ಕಡತವನ್ನು ಎಸೆದು, ಈ ಬಾರಿ ಚರಂಡಿಗಳನ್ನು ಸ್ವಚ್ಛಗೊಳಿಸದಿದ್ದರೆ ತಲೆ ಉರುಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಎಂಜಿನಿಯರ್ ಮಾರ್ಚ್ ವರದಿಯನ್ನು ಜೂನ್‌ನಲ್ಲಿ ತೋರಿಸಿದ್ದಾರೆ. ಇದು ಮೇಯರ್ ಅವರನ್ನು ಮತ್ತಷ್ಟು ಕೆರಳಿಸಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version