2:30 AM Wednesday 20 - August 2025

ಕಾಪಿ ರೈಟ್: ವರಾಹ ರೂಪಂ ಹಾಡು ಯೂಟ್ಯೂಬ್ ನಿಂದ ಡಿಲೀಟ್!

varaha roopam
12/11/2022

ಬೆಂಗಳೂರು: ಕಾಪಿರೈಟ್‌ ವಿವಾದ ಬೆನ್ನಲ್ಲೆ ಕಾಂತಾರ ಚಿತ್ರತಂಡ ನ್ಯಾಯಾಲಯದ ಆದೇಶದ ಮೇರೆಗೆ ಯೂಟ್ಯೂಬ್‌ ಮತ್ತು ಮ್ಯೂಸಿಕ್‌ ಆಪ್‌ಗಳಿಂದ ವರಾಹ ರೂಪಂ ಹಾಡನ್ನು ಡಿಲೀಟ್‌ ಮಾಡಿದೆ.

ತೈಕ್ಕುಡಂ ಬ್ರಿಡ್ಜ್‌ ತಮ್ಮ ʼನವರಸಂʼ ಹಾಡಿನ ಟ್ಯೂನ್‌ನನ್ನು ಕಾಂತಾರ ಚಿತ್ರತಂಡ ʼವರಾಹ ರೂಪಂʼಗೆ ಬಳಕೆ ಮಾಡಿದೆ ಎಂದು ನ್ಯಾಯಾಲಯದ ಮೇಟ್ಟಿಲೇರಿದ್ದರು. ಆದರೆ, ರಿಷಬ್ ಶೆಟ್ಟಿ ಹಾಗೂ ಕಾಂತಾರ ಚಿತ್ರತಂಡ, ಇದು ನಮ್ಮದೇ ಸ್ವಂತ ಹಾಡು ಎಂದು ವಾದಿಸಿದ್ದರು.

ತೈಕ್ಕುಡಂ ಬ್ರಿಡ್ಜ್‌ ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ʼವರಾಹ ರೂಪಂʼ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿದ್ದು, ಕೋರ್ಟ್ ಆದೇಶದಂತೆ ಯೂಟ್ಯೂಬ್‌ ಚಾನೆಲ್‌ ಸೇರಿ ಎಲ್ಲಾ ಮ್ಯೂಸಿಕ್‌ ಆಪ್’‌ಗಳಿಂದ ವರಾಹ ರೂಪಂ ಹಾಡನ್ನು ಚಿತ್ರತಂಡ ತೆಗೆದು ಹಾಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version