ವಿಜೃಂಭಣೆಯಿಂದ ನಡೆದ ಕರಂಬಾರು ಶಾಲಾ ಪ್ರಾರಂಭೋತ್ಸವ

ಬಜಪೆ: ಕರಂಬಾರು ಶಾಲಾ ಪ್ರಾರಂಭೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಕರಂಬಾರು ಜಂಕ್ಷನ್ ನಿಂದ ಶಾಲೆಯವರೆಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮವನ್ನು ಬಜಪೆ ಪಟ್ಟಣ ಪಂಚಾಯತ್ ನಿವೃತ್ತ ಮುಖ್ಯಾಧಿಕಾರಿ ಪ್ರಕಾಶ್ ಮೂಲ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದಾರೆ, ಕರಂಬಾರು ಶಾಲೆ ಜಿಲ್ಲೆಗೆ ಮಾದರಿ ಎಂದು ಕೊಂಡಾಡಿದರು.
ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಪಠ್ಯ ಪುಸ್ತಕ ಮತ್ತು ಶಾಲಾ ಯುನಿಫಾರ್ಮ್ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಶಿಕ್ಷಣ ಕಾರ್ಯದರ್ಶಿ ಕೃಷ್ಣಾನಂದ ಡಿ., ಜೊತೆ ಕಾರ್ಯದರ್ಶಿ ಉಮೇಶ್ ಅಮೀನ್, ಕ್ರೀಡಾ ಕಾರ್ಯದರ್ಶಿ ನವೀನ್ ಚಂದ್ರ ಸಾಲ್ಯಾನ್, ಸದಸ್ಯೆ ನೇತ್ರಾಕ್ಷಿ, SDMC ಉಪಾಧ್ಯಕ್ಷರಾದ ಲಾವಣ್ಯ,
SDMC ಸದಸ್ಯರಾದ ಪದ್ಮನಾಭ ಮರಕಡ, ರಶ್ಮಿ, ಪ್ರಮೀಳಾ, ವಿಜಯಶ್ರೀ, ದಿವ್ಯಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು. ಗೀತಾ ಟೀಚರ್ ನಿರೂಪಿಸಿದರು. ಉಷಾ M. ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD