11:49 PM Thursday 11 - December 2025

ಕರಾವಳಿಯ ವಿವಿಧೆಡೆ ಮಳೆ; ಒಣಗಲು ಹಾಕಿದ ಬೆಳೆಗಳು ಒದ್ದೆಯಾಗಿ ರೈತರಿಗೆ ನಷ್ಟ

19/02/2021

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಸುಮಾರು 3:30ರ ವೇಳೆಗೆ ಉತ್ತಮ ಮಳೆಯಾಗಿದ್ದು, ಬೆಳಗ್ಗೆ 8 ಗಂಟೆಯವರೆಗೂ ಹನಿ ಮಳೆ ಸುರಿದಿದೆ.

ತಾಲೂಕಿನ ಉಜಿರೆ, ಚಾರ್ಮಾಡಿ, ಮುಂಡಾಜೆ, ಬೆಳ್ತಂಗಡಿ, ಧರ್ಮಸ್ಥಳ, ಕಲ್ಮಂಜ, ನಿಡ್ಲೆ, ಕಳೆಂಜ, ಬೆಳಾಲು, ಕಣಿಯೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ.

ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಇದರಿಂದಾಗಿ ಒಣಗಲು ಹಾಕಿದ್ದ ಅಡಿಕೆ, ಇನ್ನಿತರ ಕೃಷಿ ಉತ್ಪನ್ನಗಳು ಒದ್ದೆಯಾಗಿ ಹಾಳಾಗಿವೆ.

ಇತ್ತೀಚಿನ ಸುದ್ದಿ

Exit mobile version