12:22 PM Thursday 11 - December 2025

ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

17/10/2020

ಬೆಂಗಳೂರು: ಪ್ರತಿಭಾವಂತ ಕಾನೂನು ಪದವೀಧರರಿಗೆ, ಕಾನೂನು ವೃತ್ತಿಗೆ ಸೇರ್ಪಡೆ, ಕಾನೂನು ತಕರಾರು ಅರ್ಜಿಗಳ ವಿವಿಧ ರೂಪಗಳು, ಕಾನೂನಿನ ವಿವಿಧ ಶಾಖೆಗಳು ಮತ್ತು ನ್ಯಾಯಾಲಯದ ಕಾರ್ಯವಿಧಾನಗಳ ಪರಿಚಯ ಹಾಗೂ ನವ ಕಾನೂನು ಪದವೀಧರರಿಗೆ ಉತ್ತೇಜನ ನೀಡುವ ಸಲುವಾಗಿ ಕಾನೂನಿನಲ್ಲಿ ಪದವಿ, ಗಣಕಯಂತ್ರ ತರಬೇತಿ ಹೊಂದಿರುವಂತಹ ಅಭ್ಯರ್ಥಿಗಳಿಂದ 33 ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು ಹಾಗೂ ಅರ್ಜಿದಾರರ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನದಂದು 30 ವರ್ಷಗಳನ್ನು ಮೀರಿರಬಾರದು. ಅರ್ಜಿ ಸಲ್ಲಿಸಲು ನವೆಂಬರ್ 17, 2020 ಕೊನೆಯ ದಿನಾಂಕವಾಗಿದೆ.ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ: www.karnatakajudiciary.kar.nic.in ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

Exit mobile version