2:15 AM Saturday 31 - January 2026

ಕೇವಲ 20 ರೂಪಾಯಿಗಾಗಿ ಇಡ್ಲಿ ಮಾರಾಟಗಾರನ ಹತ್ಯೆ!

06/02/2021

ಥಾಣೆ:  ಕೇವಲ 20 ರೂಪಾಯಿಗಾಗಿ ಇಡ್ಲಿ ಮಾರಾಟಗಾರನನ್ನು ಮೂವರು ವ್ಯಕ್ತಿಗಳು ಸೇರಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದಿದ್ದು,  ಕೃತ್ಯದ ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ವೀರೇಂದ್ರ ಯಾದವ್ ಹತ್ಯೆಯಾದ ಇಡ್ಲಿ ಮಾರಾಟಗಾರರಾಗಿದ್ದಾರೆ. ಇಲ್ಲಿನ ಮೀರಾ ರೋಡ್ ನಲ್ಲಿ ಇವರು ಇಡ್ಲಿ ಮಾರಾಟ ಮಾಡುವ ಅಂಗಡಿ ನಡೆಸುತ್ತಿದ್ದರು. ಮೂವರು ಗ್ರಾಹಕರು ತಮಗೆ 20 ರೂಪಾಯಿ ಕೊಡಲು ಬಾಕಿ ಇದೆ ಎಂದು ಅಂಗಡಿ ಮಾಲಕನ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ವಾಗ್ವಾದ ತೀವ್ರಗೊಂಡು ಕೈಕೈ ಮಿಲಾಯಿಸಿಕೊಂಡಿದ್ದು, ಈ ವೇಳೆ ಮೂವರು ಸೇರಿ ಅಂಗಡಿ ಮಾಲಕನನ್ನು ತಳ್ಳಿದ್ದು, ಮಾಲಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಮಾರ್ಗ ಮಧ್ಯೆ ಅವರು ಸಾವಿಗೀಡಾಗಿದ್ದಾರೆ.

ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version